ಅಮೇಜ಼ಾನ್ ಸಿಇಓ ಹಾಗೂ ಸ್ಥಾಪಕ ಜೆಫ್ ಬೆಜ಼ೋಸ್ ಸದಾ ತಮ್ಮ ಐಷಾರಾಮಿ ಜೀವನದಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಕೋಷೆಲ್ಲಾ ಹೆಸರಿನ ಜನಪ್ರಿಯ ಸಂಗೀತ ಉತ್ಸವದ ವೇಳೆ ವಿಶಿಷ್ಟವಾದ ಅಂಗಿಯೊಂದರಲ್ಲಿ ಕಾಣಿಸಿಕೊಂಡ ಬೆಜ಼ೋಸ್ ಮತ್ತೆ ಸದ್ದು ಮಾಡಿದ್ದಾರೆ.
ಟೆಕ್ ಕ್ಷೇತ್ರದ ಶತಕೋಟ್ಯಾಧಿಪತಿ ಬೆಜ಼ೋಸ್, ತಮ್ಮದೇ ಕಂಪನಿಯಲ್ಲಿ $12 (980 ರೂ.) ಬೆಲೆ ಬಾಳುವ ಸರಳವಾದ ಚಿಟ್ಟೆ ಕಲಾಕೃತಿಗಳಿರುವ ಶರ್ಟ್ ಧರಿಸಿ ಬಂದಿದ್ದರು.
ರೆಡ್ಡಿಟ್ ಬಳಕೆದಾರರೊಬ್ಬರು ಈ ಶರ್ಟ್ ಬೆಲೆಯನ್ನು ಪತ್ತೆ ಮಾಡಿ ಇದರ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಕೆಲವರು ಬೆಜ಼ೋಸ್‌ರ ಸರಳತೆ ಮೆಚ್ಚಿಕೊಂಡರೆ, ಮಿಕ್ಕವರಿಗೆ ಆತ ಧರಿಸಿರುವ ಅಂಗಿಯ ಬೆಲೆಯ ಸತ್ಯಾಸತ್ಯತೆ ಮೇಲೆ ಅನುಮಾನ ಮೂಡಿದೆ.
https://twitter.com/traptari/status/1651356507299016705?ref_src=twsrc%5Etfw%7Ctwcamp%5Etweetembed%7Ctwterm%5E1651356507299016705%7Ctwgr%5E197c2a4ff28527b478358c5f43d978021990577e%7Ctwcon%5Es1_&ref_url=https%3A%2F%2Fwww.news18.com%2Fbuzz%2Fjeff-bezos-coachella-shirt-breaks-the-internet-can-you-guess-the-price-7654417.html