
ಬೆಂಗಳೂರು: ಜೀವನ್ ಸಾಥಿ ವೆಬ್ ಸೈಟ್ ಮೂಲಕ ಯುವತಿಗೆ ಪರಿಚಯನಾದ ಯುವಕನೊಬ್ಬ ಬರೀಬ್ಬರಿ 60 ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರಿನ ಶಿವಲಿಂಗೇಶ್ ಎಂಬ ಯುವಕ 2022ರಲ್ಲಿ ಜೀವನ್ ಸಾಥಿ ವೆಬ್ ಸೈಟ್ ಮೂಲಕ ಯುವತಿಗೆ ಪರಿಚಯನಾಗಿದ್ದ. ಇಬ್ಬರು ಭೇಟಿಯಾಗಿ ಮದುವೆ ಮಾತುಕತೆ ಕೂಡ ನಡೆದಿತ್ತು. ಈ ಮಧ್ಯೆ ಶಿವಲಿಂಗೇಶ್ ತನ್ನ ತಾಯಿಗೆ ಆರೋಗ್ಯ ಸಮಸ್ಯೆಯಿದೆ ಚಿಕಿತ್ಸೆಗೆ ತಕ್ಷಣ ಹಣದ ಅಗತ್ಯವಿದೆ ಎಂದು ನಾಟಕ ಮಾಡಿದ್ದಾನೆ. ಯುವತಿಯಿಂದ ಹಂತ ಹಂತವಾಗಿ 60 ಲಕ್ಷ ರೂಪಾಯಿ ಪಡೆದಿದ್ದಾನೆ.
ಹೀಗೆ ಹಣ ಪಡೆದ ವ್ಯಕ್ತಿ ಸುಳಿವಿಲ್ಲ. ಅನುಮಾನಗೊಂದ ಯುವತಿ ಆತನ ಹಿನ್ನೆಲೆ ಪರಿಶೀಲಿಸಿದಾಗ ಇದೇ ರೀತಿ ಬೇರೆಯವರಿಂದಲೂ ಹಣ ಪಡೆದಿರುವುದು ಬೆಳಕಿಗೆ ಬಂದಿದೆ. ಆರೋಪಿ ಶಿವಲಿಂಗೇಶ್ ಕ್ಯಾಸಿನೋ ದಲ್ಲಿ ಹಣ ಹೂಡಿಕೆ ಮಾಡುವ ಗೀಳು ಹೊಂದಿದ್ದ. ಇದೇ ಕಾರಣಕ್ಕೇ ಹಲವರ ಬಳಿ ಸುಳ್ಳು ಹೇಳಿ ಹಣ ಪಡೆಯುತ್ತಿದ್ದ. ಈ ಬಗ್ಗೆ ಆತನ ಕುಟುಂಬಸ್ಥರೇ ಪೋಸ್ಟ್ ಹಾಕಿದ್ದು, ಶಿವಲಿಂಗೇಶ್ ಬಗ್ಗೆ ವಿವರಿಸಿದ್ದಾರೆ.
ಶಿವಲಿಂಗೇಶ್ ಕ್ಯಾಸಿನೋ ಚಟಕ್ಕೆ ಬಿದ್ದು ಎಲ್ಲರಿಂದ ಹಣ ವಸೂಲಿ ಮಾಡುತ್ತಿದ್ದ. ನನ್ನ ತಾಯಿಗೆ ಹಾರ್ಟ್ ಸರ್ಜರಿ, ಬ್ರೇನ್ ಸರ್ಜರಿ, ಮೆಡಿಕಲ್ ಎಮರ್ಜನ್ಸಿ ಇದೆ. ನನ್ನ ಬ್ಯಾಂಕ್ ಖಾತೆ ಸಮಸ್ಯೆಯಾಗಿದೆ. ತುರ್ತಾಗಿ ತಾಯಿಗೆ ಹಣ ಕಳುಹಿಸಬೇಕು ಎಂದು ಸುಳ್ಳು ಹೇಳಿ ಹಣ ಪಡೆದುಕೊಳ್ಳುತ್ತಾನೆ. ಕುಟುಂಬದಿಂದಲೇ 20 ಲಕ್ಷ, ಸ್ನೇಹಿತರಿಂದ 50 ಲಕ್ಷ, ಮೂರು ಬ್ಯಾಂಕ್ ಗಳಿಂದ 30-40 ಲಕ್ಷಕ್ಕಿಂತ ಹೆಚ್ಚು ಸಾಲ ಪಡೆದಿದ್ದಾನೆ. ಯಾರೂ ಆತನಿಗೆ ಹಣ ಕೊಡಬೇಡಿ ಎಂದು ಪೋಸ್ಟ್ ಹಾಕಿದ್ದಾರೆ. ವಂಚನೆಗೊಳಗಾದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.