ಕೋವಿಡ್ ಕಾಟದ ನಡುವೆಯೂ ಕಳೆದ ವರ್ಷದ ಮಾರಾಟದಲ್ಲಿ 130% ವೃದ್ಧಿ ಸಾಧಿಸಿರುವ ಜೀಪ್ ಕಂಪನಿಯು, ಈ ವರ್ಷ ದೇಶದ ಆಟೋಮೊಬೈಲ್ ಮಾರುಕಟ್ಟೆಗೆ ಹೊಸ ಉತ್ಪನ್ನಗಳ ಬಿಡುಗಡೆಗೆ ಉತ್ಸುಕವಾಗಿದೆ.
ಒಮಿಕ್ರಾನ್ ರೂಪಾಂತರಿ ವ್ಯಾಪಿಸುತ್ತಿದ್ದರೂ ಸಹ ದೇಶೀ ಆಟೋಮೊಬೈಲ್ ಮಾರುಕಟ್ಟೆ ಚೆನ್ನಾಗಿ ಓಡಲಿದೆ ಎಂಬ ಆಶಾಭಾವವನ್ನು ಜೀಪ್ ಇಂಡಿಯಾದ ಮುಖ್ಯಸ್ಥ ನಿಪುಣ್ ಮಹಾಜನ್ ವ್ಯಕ್ತಪಡಿಸಿದ್ದಾರೆ.
ʼಸೀಗೆಕಾಯಿʼ ಜೊತೆ ಕೂದಲಿಗೆ ನೀಡಿ ನೈಸರ್ಗಿಕ ಕೇರ್
ತನ್ನ ಕಾಂಪಾಸ್ ಎಸ್‌ಯುವಿಯ ಹೊಸ ಆವೃತ್ತಿಯಲ್ಲಿ ಫೆಬ್ರವರಿ 2021ರಲ್ಲಿ ಬಿಡುಗಡೆ ಮಾಡಿದ ಜೀಪ್, ಇದರೊಂದಿಗೆ ಸ್ಥಳೀಯವಾಗಿ ಜೋಡಣೆಯಾದ ರಾಂಗ್ಲರ್‌ನ 12,136 ಘಟಕಗಳನ್ನು 2021ರಲ್ಲಿ ಮಾರಾಟ ಮಾಡಿದೆ. 2020ರಲ್ಲಿ ಇದೇ ವಾಹನದ 5,282 ಘಟಕಗಳನ್ನು ಮಾರಿದ್ದ ಜೀಪ್ ಈ ಅವಧಿಯಲ್ಲಿ 130% ವೃದ್ಧಿಯನ್ನು ಸೇಲ್ಸ್‌ನಲ್ಲಿ ದಾಖಲಿಸಿದೆ.
ಆಟೋಮೊಬೈಲ್ ದಿಗ್ಗಜ ಸ್ಟೆಲ್ಲಾಂಟಿಸ್‌ನ ಬ್ರಾಂಡ್‌ಗಳಲ್ಲಿ ಒಂದಾದ ಜೀಪ್ ಭಾರತದಲ್ಲಿ ಕಾಂಪಾಸ್ ಮತ್ತು ರಾಂಗ್ಲರ್ ಹೆಸರಿನ ಎರಡು ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.
ಪುಣೆ ಬಳಿಯ ರಂಜನ್‌ಗಾಂವ್‌ನಲ್ಲಿರುವ ತನ್ನ ಸೌಲಭ್ಯದಲ್ಲಿ ಜೀಪ್ ವಾಹನಗಳ ಉತ್ಪಾದನೆ ಮಾಡುತ್ತಿರುವ ಜೀಪ್ ಕಳೆದ ವರ್ಷದ ಮಾರ್ಚ್ ಮಧ್ಯ ಭಾಗದಿಂದ ಇದೇ ಸೌಲಭ್ಯದಲ್ಲಿ ರಾಂಗ್ಲರ್ ಅನ್ನು ಉತ್ಪಾದನೆ ಮಾಡುತ್ತಿದೆ.
ಫೆಬ್ರವರಿಯಲ್ಲಿ ಕಾಂಪಾಸ್ ಟ್ರೇಲ್‌ಹಾಕ್‌ನಿಂದ ಮೊದಲ್ಗೊಂಡು, 2022ರಲ್ಲಿ ಜೀಪ್‌ನ ಇನ್ನೆರಡು ಹೊಸ ವಾಹನಗಳನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವುದಾಗಿ ಮಹಾಜನ್ ತಿಳಿಸಿದ್ದಾರೆ. ಹೊಸ ಉತ್ಪನ್ನಗಳ ಅಭಿವೃದ್ಧಿಗೆ ಜೀಪ್ $250 ದಶಲಕ್ಷ ಹೂಡಿಕೆ ಮಾಡಿದ್ದು, ದೇಶದಲ್ಲಿ ಹೊಸ ಉತ್ಪನ್ನಗಳನ್ನು ತರುತ್ತಲೇ ಇರುವುದಾಗಿ ಅವರು ತಿಳಿಸಿದ್ದಾರೆ.