
ನವದೆಹಲಿ: ಜುಲೈ 3 ರಂದು ಜೀ ಅಡ್ವಾನ್ಸಡ್ ಪರೀಕ್ಷೆ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ತಿಳಿಸಿದ್ದಾರೆ.
ಜಾಯಿಂಟ್ ಎಂಟ್ರನ್ಸ್ ಎಕ್ಸಾಮಿನೇಷನ್(ಜೆಇಇ) ಅಡ್ವಾನ್ಸ್ -2021 ಪರೀಕ್ಷೆ ದಿನಾಂಕವನ್ನು ಘೋಷಣೆ ಮಾಡಲಾಗಿದ್ದು, ಜುಲೈ 3 ರಂದು ಪರೀಕ್ಷೆ ನಡೆಯಲಿದೆ. ಈ ವರ್ಷ ಶೇಕಡ 75 ರಷ್ಟು ಮಾನದಂಡಗಳು ಅನ್ವಯವಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ದಿನಾಂಕ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಗೆ ಪ್ರವೇಶ ಪಡೆಯಲು ಅರ್ಹತಾ ಮಾನದಂಡಗಳನ್ನು ಪ್ರಕಟಿಸಲಾಗಿದ್ದು, ಶೇಕಡ 75 ರಷ್ಟು ಮಾನದಂಡಗಳು ಅನ್ವಯವಾಗುವುದಿಲ್ಲ. ಐಐಟಿ ಖರಗ್ ಪುರ ಪರೀಕ್ಷೆಯನ್ನು ನಡೆಸಲಿದೆ ಎಂದು ಸಚಿವರು ತಿಳಿಸಿದ್ದಾರೆ.