ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಮ್ಮ ಪುತ್ರ ಸಿಎಂ ಫೈಯಾಜ್ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೀದರ್ ಜಿಲ್ಲೆ ಹುಮನಾಬಾದ್ ಕ್ಷೇತ್ರದಿಂದ ಕಣಕ್ಕಿಳಿಸುತ್ತಿದ್ದಾರೆ.
ಈ ಹಿನ್ನಲೆಯಲ್ಲಿ ಸಿಎಂ ಇಬ್ರಾಹಿಂ ಭಾನುವಾರದಂದು ಚಿಟಗುಪ್ಪ ಪಟ್ಟಣದ ಸೈಯದ್ ಸಲಾರೆ ಏ ಮಕದುಮ್ ದರ್ಗಾಕ್ಕೆ ತಮ್ಮ ಪುತ್ರನೊಂದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದು, ಈ ವೇಳೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನನ್ನ ಮೊದಲ ಪುತ್ರ ಈಗಾಗಲೇ ತೀರಿಕೊಂಡಿದ್ದು, ಈಗ ಇರುವವನು ಒಬ್ಬನೇ ಮಗ. ಆತನನ್ನು 700 ಕಿಲೋಮೀಟರ್ ದೂರದ ಹುಮನಾಬಾದ್ ಗೆ ಜನಸೇವೆ ಸಲುವಾಗಿ ಕರೆತಂದು ನಿನ್ನ ಉಡಿಗೆ ಹಾಕಿದ್ದೇನೆ. ಹರಸಿ ಆಶೀರ್ವದಿಸಬೇಕು ಎಂದು ಅಳುತ್ತಲೇ ಸಿಎಂ ಇಬ್ರಾಹಿಂ ಪ್ರಾರ್ಥಿಸಿದ್ದಾರೆ. ಈ ಸಂದರ್ಭದಲ್ಲಿ ಪುತ್ರ ಕೂಡಾ ಭಾವುಕರಾಗಿದ್ದಾರೆ.