ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಂಚರತ್ನ ರಥಯಾತ್ರೆ 4 ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಪಂಚರತ್ನ ಯಾತ್ರೆ ಮುಂದುವರೆಯಲಿದೆ. ಹುಂಚದಕಟ್ಟೆಯಿಂದ ಇಂದು ಆರಂಭವಾಗಲಿರುವ ಪಂಚರತ್ನ ರಥಯಾತ್ರೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕೆ. ನೇತೃತ್ವದಲ್ಲಿ ಜೆಡಿಎಸ್ ಅಭ್ಯರ್ಥಿ ಯಡೂರು ರಾಜಾರಾಮ್ ಪರ ಮತಯಾಚನೆ ಮಾಡಲಾಗುವುದು.
ನಾರಾಯಣ ಗುರುಪೀಠದಲ್ಲಿ ಜನರೊಂದಿಗೆ ಹೆಚ್.ಡಿ.ಕೆ. ಸಂವಾದ ನಡೆಸಲಿದ್ದು, ನಂತರ ಹುಂಚ ಪದ್ಮಾವತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಆರಗ ಗ್ರಾಮದಲ್ಲಿ ಜೆಡಿಎಸ್ ಮುಖಂಡರ ಸಭೆ ನಡೆಸಿ ನಂತರ ತೀರ್ಥಹಳ್ಳಿಯಲ್ಲಿ ಸಭೆ ನಡೆಸುವರು. ಭೀಮನ ಕಟ್ಟೆ ಮಠ ಮಾರ್ಗವಾಗಿ ಮೇಗರವಳ್ಳಿ ಗ್ರಾಮದ ಬಳಿ ಎಲೆ ತೋಟ ವೀಕ್ಷಣೆ ಮಾಡಿ ರೈತರ ಸಂಕಷ್ಟ ಆಲಿಸಲಿದ್ದಾರೆ. ಹೆಗ್ಗೋಡು ಬಳಿಕ ಕಮ್ಮರಡಿ ಗ್ರಾಮದಲ್ಲಿ ಸಭೆ ನಂತರ ಕ್ಷೇತ್ರ ಹಲವು ಗ್ರಾಮಗಳಲ್ಲಿ ಯಾತ್ರೆ ಸಂಚರಿಸಲಿದೆ.
ಮಧ್ಯಾಹ್ನ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯತ್ತ ಪಂಚರತ್ನ ರಥಯಾತ್ರೆ ಸಾಗಲಿದ್ದು, ಶೃಂಗೇರಿ ಕ್ಷೇತ್ರದ ಬೇಗೂರು ಕೈಮರ, ಹೊಳೆಕೊಪ್ಪ ಸೇರಿದಂತೆ ಹಲವು ಗ್ರಾಮಗಳಲ್ಲಿ ಪ್ರಚಾರ ನಡೆಸಲಾಗುವುದು. ನಂತರ ಶೃಂಗೇರಿ ಮಠಕ್ಕೆ ಭೇಟಿ ಹೆಚ್.ಡಿ.ಕೆ. ನೀಡಲಿದ್ದಾರೆ. ಶೃಂಗೇರಿ ವೈಕುಂಠಪುರದ ಮೈದಾನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.