ಬೆಂಗಳೂರು: ಚನ್ನಪಟ್ಟಣದಲ್ಲಿ ಜೆಡಿಎಸ್ ಲೆಕ್ಕಾಚಾರ ಉಲ್ಟಾಪಲ್ಟಾ ಆಗಿದೆ. ನಿಖಿಲ್ ಕುಮಾರಸ್ವಾಮಿ ಸೋಲಿಸಿ ಡಿಕೆ ಬ್ರದರ್ಸ್ ಜೆಡಿಎಸ್ ಭದ್ರಕೋಟೆಗೆ ಲಗ್ಗೆ ಹಾಕಿದ್ದಾರೆ.
ಡಿಕೆ ಬ್ರದರ್ಸ್ ಪ್ರವೇಶದಿಂದ ಜೆಡಿಎಸ್ ನಾಯಕರ ಸೆಳೆಯುವ ಆತಂಕ ಉಂಟಾಗಿದೆ. ಈಗಾಗಲೇ ಪಕ್ಷದಿಂದ ಜಿ.ಟಿ. ದೇವೇಗೌಡ ಅಂತರ ಕಾಯ್ದುಕೊಂಡಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಜೆಡಿಎಸ್ ಮುಖಂಡರನ್ನು ಹಿಡಿದಿಟ್ಟುಕೊಳ್ಳುವ ಸವಾಲು ಎದುರಾಗಿದೆ.
ಚನ್ನಪಟ್ಟಣ ಗೆಲುವಿನಿಂದ ಡಿಕೆ ಬ್ರದರ್ಸ್ ಮತ್ತು ಯೋಗೇಶ್ವರ್ ಸ್ನೇಹ ಗಟ್ಟಿಯಾಗಿದೆ. ಹಳೆ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸಲು ಡಿಕೆ ಬ್ರದರ್ಸ್ ಪ್ಲಾನ್ ಮಾಡಿಕೊಂಡಿದ್ದಾರೆ. ಹೀಗಾಗಿ ಜೆಡಿಎಸ್ ಕಾರ್ಯಕರ್ತರು, ಮುಖಂಡರು ಪಕ್ಷಾಂತರವಾಗುವ ಆತಂಕ ಶುರುವಾಗಿದೆ. ಕುಮಾರಸ್ವಾಮಿಗೆ ಹಳೆ ಮೈಸೂರು ಭಾಗದಲ್ಲಿ ಅಸ್ತಿತ್ವ ಉಳಿಸಿಕೊಳ್ಳುವ ಸವಾಲು ಎದುರಾಗಿದೆ ಎಂದು ಹೇಳಲಾಗಿದೆ.