
ಚಿಕ್ಕಬಳ್ಳಾಪುರ: ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಬಗ್ಗೆ ನನಗೆ ಕನ್ಫ್ಯೂಷನ್ ಆಗಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಚಿವ ಡಾ.ಕೆ. ಸುಧಾಕರ ಟಾಂಗ್ ಕೊಟ್ಟಿದ್ದಾರೆ.
ವಿಜಯ ಸಿಗುವುದಕ್ಕೂ ಮುನ್ನ ಸಂಕಲ್ಪ ಮಾಡಿಕೊಳ್ಳುವುದೇ ವಿಜಯ ಸಂಕಲ್ಪ ಯಾತ್ರೆ ಎಂದು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಹೇಳಿ ಎಂದು ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿಯಲ್ಲಿ ಸಚಿವ ಸುಧಾಕರ್ ಹೇಳಿದ್ದಾರೆ.
ಒಂದು ವೇಳೆ ಜೆಡಿಎಸ್ ಐಸಿಯುನಲ್ಲಿ ಇದ್ದರೆ ಅಲ್ಲಿ ಇರುವುದು ಬೇಡ. ಜೆಡಿಎಸ್ ಜನರಲ್ ವಾರ್ಡ್ ಗೆ ಬರಲಿ ಎಂದು ಹೇಳಿದ್ದಾರೆ.