ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರನ್ನು ಮತ್ತೆ ಜೆಡಿಎಸ್ ಗೆ ಕರೆತರುವ ಪ್ರಶ್ನೆಯೇ ಇಲ್ಲವೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನನ್ನ ರಾಜಕೀಯ ಜೀವನದಲ್ಲಿ ಬಹಳ ಅನುಭವವಾಗಿದೆ. ಶಾಸಕ ಜಿ.ಟಿ. ದೇವೇಗೌಡರು ನಮ್ಮಿಂದ ದೂರ ಹೋಗಿದ್ದಾರೆ. ಜೆಡಿಎಸ್ ಶಾಸಕ ಸಾರಾ ಮಹೇಶ್ ಕಾರಣಕ್ಕೆ ದೂರವಾಗುತ್ತಿದ್ದೇನೆ ಎಂದಿದ್ದರು. ಜಿ.ಟಿ. ದೇವೇಗೌಡರಿಗೆ ಮಹೇಶ್ ಅಂತದೇನು ಮಾಡಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ಜಿಟಿಡಿ ಮತ್ತೆ ಜೆಡಿಎಸ್ ಗೆ ಬರುತ್ತೇನೆ ಎಂದರೂ ನಾವು ಕರೆಸಿಕೊಳ್ಳುವುದಿಲ್ಲ. ಅವರ ಬಗ್ಗೆ ದೇವೇಗೌಡರಿಗೆ ಸಾಫ್ಟ್ ಕಾರ್ನರ್ ಇತ್ತು. ಅವರ ಬಗ್ಗೆ ಕೆಲವರು ದೇವೇಗೌಡರಿಗೆ ಹೇಳಿದ್ದರು. ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದು ಹೆಚ್.ಡಿ.ಕೆ. ತಿಳಿಸಿದ್ದಾರೆ.