ಬೆಂಗಳೂರು: ಜಲ್ಲಿ ಕ್ರಷರ್, ಎಂ -ಸ್ಯಾಂಡ್ ನಿರ್ವಹಣೆ, ಕಲ್ಲು ಗರಣಿಗಾರಿಕೆ ನಿಯಮ ಸರಳೀಕರಣ ಮಾಡಲಾಗಿದೆ. ಸಣ್ಣ ಖನಿಜ ನೀತಿ -2023ಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಣ್ಣ ಗಣಿಗಾರಿಕೆಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಏಕರೂಪದ ನಿಯಮಗಳ ಜಾರಿಗೆ ಒತ್ತು ನೀಡುವ ಮೂಲಕ ಈ ನೀತಿಯನ್ನು ರೂಪಿಸಲಾಗಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಜಲ್ಲಿ ಕ್ರಷರ್ ಮಾಲೀಕರ ಬಹು ದಿನಗಳ ಬೇಡಿಕೆಯಂತೆ ಸಚಿವ ಸಂಪುಟ ಉಪಸಮಿತಿ ಹಲವು ಸುತ್ತಿನ ಸಮಾಲೋಚನೆಯ ನಂತರ ನೀತಿಯನ್ನು ಸಿದ್ಧಪಡಿಸಿದೆ. ನಿಯಮಾವಳಿಯಲ್ಲಿ ಸಾಕಷ್ಟು ಸರಳೀಕರಣ ಮಾಡಲಾಗಿದೆ. ಗಣಿ ಮಂಜೂರಾತಿ ಪ್ರಕ್ರಿಯೆಯನ್ನು ಕೂಡ ಸರಳಗೊಳಿಸಲಾಗಿದೆ. ಉದ್ಯಮ ಸ್ನೇಹಿ ಆಗಿ ಸಣ್ಣ ಖನಿಜ ನೀತಿ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.