
ತಮ್ಮ ವಿರುದ್ಧ ಕೇಳಿ ಬಂದ ಟೀಕಾಸ್ತ್ರಗಳಿಂದ ರೋಸಿ ಹೋದಂತೆ ಕಂಡ ನಟಿ ಹಾಗೂ ರಾಜ್ಯಸಭಾ ಸಂಸದೆ ಜಯಾ ಬಚ್ಚನ್, ಆಡಳಿತಾರೂಢ ಬಿಜೆಪಿ ವಿರುದ್ಧ ಮಾತಿನ ತಿರುಗೇಟು ನೀಡಲು ಸದನದ ಕಲಾಪದ ಅವಧಿಯನ್ನು ಬಳಸಿಕೊಂಡಿದ್ದಾರೆ.
ಎನ್‌ಡಿಪಿಎಸ್ (ತಿದ್ದುಪಡಿ) ಕಾಯಿದೆ ಸಂಬಂಧ ಚರ್ಚೆಯೊಂದರ ವೇಳೆ ಮಾತನಾಡಿದ ಜಯಾ ಬಚ್ಚನ್, ಇದೇ ಅವಧಿಯಲ್ಲಿ ಅಮಾನತಿಗೊಳಗಾದ ವಿರೋಧ ಪಕ್ಷದ 12 ಸಂಸದರ ವಿಚಾರವೆತ್ತಿ, “ನಿಮಗೂ ಕೆಟ್ಟ ದಿನ ಬರುತ್ತದೆ…… ಇದು ನಿಮಗೆ ನನ್ನ ಶಾಪ” ಎಂದಿದ್ದಾರೆ.
ತಮ್ಮ ವಿರುದ್ಧ ಸದನದಲ್ಲಿ ವೈಯಕ್ತಿಕ ಆಪಾದನೆಗಳನ್ನು ಮಾಡಲಾಗಿದೆ ಎಂದು ಜಯಾ ಬಚ್ಚನ್ ಆರೋಪ ಮಾಡುತ್ತಾ, ಮಾತನಾಡಿದ ಜಯಾ ಬಚ್ಚನ್, ಮಸೂದೆ ಬಗ್ಗೆ ಮಾತನಾಡಿ ಎಂದು ಕರೆದಾಗ, “ನನ್ನ ವಿರುದ್ಧ ಮಾಡಲಾದ ಆಪಾದನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ನಿರೀಕ್ಷಿಸುತ್ತೇನೆ. ನೀವು ಕುರ್ಚಿಯ ಮೇಲೆ ಕುಳಿತಿದ್ದೀರಿ, ನೀವು ಯಾವುದೇ ಪಕ್ಷಕ್ಕೆ ಸೇರಿಲ್ಲ ಸರ್,” ಎಂದು ಏರು ದನಿಯಲ್ಲಿ ಅರಚಿದ್ದಾರೆ.
ಮಸಿದಿ ಬಳಿ ಸಿಲಿಂಡರ್ ಸ್ಫೋಟ; ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ
“ಸದನದಲ್ಲಿ ವೈಯಕ್ತಿಕ ನಿಂದನೆಗಳನ್ನು ಹೇಗೆ ಮಾಡುತ್ತೀರಿ? ನಿಮ್ಮ ಕೆಟ್ಟ ದಿನಗಳೂ ಸಹ ಬರಲಿವೆ, ನಾನು ನಿಮ್ಮನ್ನು ಶಪಿಸುತ್ತೇನೆ,” ಎಂದು ಜಯಾ ಹೇಳಿದ್ದಾರೆ. ಆದರೆ ಜಯಾ ವಿರುದ್ಧ ಯಾವುದೇ ರೀತಿಯ ವೈಯಕ್ತಿಕ ಹೇಳಿಕೆಯನ್ನು ಅಲ್ಲಿದ್ದ ಯಾರೊಬ್ಬರೂ ಕೊಟ್ಟಿರುವುದು ವಿಡಿಯೋ ತುಣುಕುಗಳಲ್ಲಿ ಕೇಳಿ ಬಂದಿಲ್ಲ.
ಜಯಾ ನಡೆದುಕೊಂಡ ರೀತಿಯ ಬಗ್ಗೆ ನೆಟ್ಟಿಗರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಮಾತನಾಡುವ ವೇಳೆ ಶಬ್ದಗಳ ಆಯ್ಕೆ ಮತ್ತು ಅತಿಯಾದ ವರ್ತನೆಯನ್ನು ಟೀಕಿಸಿರುವ ನೆಟ್ಟಿಗರು ಆಕೆಯನ್ನು ಸದನದಿಂದ ವಜಾಗೊಳಿಸುವಂತೆ ಕೋರಿದ್ದಾರೆ.
“ಜಯಾ ಬಚ್ಚನ್‌ಗೆ ಅದೆಂಥಾ ದುರಹಂಕಾರ. ಮತ್ತು ಇದು ಮೂರನೇ ದರ್ಜೆಯ ವರ್ತನೆ. ಕಳ್ಳತನ ಮಾಡಿ ಸಿಕ್ಕಿಬಿದ್ದವರಂತೆ ಆಕೆ ವರ್ತಿಸಿದ್ದಾರೆ. ದೇಶದ ಕಾನೂನನ್ನು ಮುರಿಯಲು ನಿಮಗೆಷ್ಟು ಧೈರ್ಯ. ನೀವೆಲ್ಲಾ ಕೈಗೆ ಸಿಗದವರೇನಲ್ಲ,” ಎಂದು ಅನೂಪ್ ಗುಪ್ತಾ ಹೆಸರಿನ ನೆಟ್ಟಿಗರೊಬ್ಬರು ಪೋಸ್ಟ್ ಮಾಡಿದ್ದಾರೆ.
“ಜಯಾ ಬಚ್ಚನ್ ತಣ್ಣಗಾದರೆ ಒಳ್ಳೆಯದು. ಕ್ಷುಲ್ಲಕ ಅರಚಾಟ, ಅರ್ಥವಿಲ್ಲದ ಸಿಟ್ಟು, ಸ್ವಲ್ಪವೂ ಅಧ್ಯಯನವಿಲ್ಲದೇ ಇರುವುದು ಒಬ್ಬ ಕೆಟ್ಟ ಪ್ರತಿನಿಧಿಯನ್ನು ಸೃಷ್ಟಿಸುತ್ತದೆ,” ಎಂದು ಸುನಂದಾ ವಸಿಶ್ಠ್ ತಿಳಿಸಿದ್ದಾರೆ.
“ಎಂಥ ದುರಹಂಕಾರ!! ಜಯಾ ಬಚ್ಚನ್ ಮಾದಕ ದ್ರವ್ಯದ ಬಗ್ಗೆ ಮಾತನಾಡುವುದನ್ನು ಬಿಟ್ಟು ಮತ್ತು ಮರ್ಯಾದೆಯ ಎಲ್ಲಾ ರೇಖೆಗಳನ್ನು ಮೀರಿ ವರ್ತಿಸಿದ್ದಲ್ಲದೇ ಶಾಪ ಹಾಕುತ್ತಿದ್ದಾರೆ…..” ಎಂದು ರೋಸಿ ಹೆಸರಿನ ಟ್ವಿಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಜಯಾ ಬಚ್ಚನ್‌ರ ಸೊಸೆ ಐಶ್ವರ್ಯಾ ರೈ ಬಚ್ಚನ್ 2016ರ ಪನಾಮಾ ಪೇಪರ್ಸ್ ಜಾಗತಿಕ ತೆರಿಗೆ ಕಾಂಡದ ತನಿಖೆ ಎದುರಿಸಲು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾದ ಮಾರನೇ ದಿನವೇ ಜಯಾ ಬಚ್ಚನ್‌ರ ಈ ಹೇಳಿಕೆಗಳು ಸಂಸತ್ತಿನಲ್ಲಿ ಕೇಳಿ ಬಂದಿವೆ.
https://twitter.com/iajaysoni/status/1473154175168962562?ref_src=twsrc%5Etfw%7Ctwcamp%5Etweetembed%7Ctwterm%5E1473154175168962562%7Ctwgr%5E%7Ctwcon%5Es1_&ref_url=https%3A%2F%2Fwww.indiatimes.com%2Fentertainment%2Fcelebs%2Fjaya-bachchan-rajya-sabha-outburst-557276.html%3Futm_source%3Dmsn.com