
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಾರುಖ್ ಖಾನ್, ನಾನು ವಯಸ್ಸಾದ, ಶಾಂತ ವ್ಯಕ್ತಿಯಂತೆ ತೆರೆ ಮೇಲೆ ಅಭಿನಯಿಸಲು ಇಷ್ಟಪಡುತ್ತೇನೆ. ಬೂದು ಗಡ್ಡ, ಬೂದು ತಲೆಗೂದಲನ್ನು ಹೊಂದಿರುವ ವೃದ್ಧ ವ್ಯಕ್ತಿಯಂತೆ ಅಭಿನಯಿಸಲು ತಾನು ಬಯಸುವುದಾಗಿ ಹೇಳಿದ್ದಾರೆ.
ನಾನು ರಾತ್ರಿಯಲ್ಲಿ ಬ್ಯಾಟ್ಮ್ಯಾನ್, ಬೆಳಿಗ್ಗೆ ಸೂಪರ್ಮ್ಯಾನ್, ಮಧ್ಯಾಹ್ನ ಸ್ಪೈಡರ್ ಮ್ಯಾನ್ ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಲು ಬಯಸುತ್ತೇನೆ ಎಂದು ಹೇಳಿದ್ದರು.
ಕುತೂಹಲಕಾರಿಯಾಗಿ, ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಬೂದು ಗಡ್ಡವನ್ನು ಹೊಂದಿರುವ ವಿಕ್ರಮ್ ಎಂಬ ವಯಸ್ಸಾದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿನ ಶಾರುಖ್ ಅವರ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ.
ಸೆಪ್ಟೆಂಬರ್ 7 ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ಸಂಜಯ್ ದತ್ ಅವರು ಕೂಡ ವಿಶೇಷ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ಡೋಗ್ರಾ ಮತ್ತು ಸುನಿಲ್ ಗ್ರೋವರ್ ಕೂಡ ನಟಿಸಿದ್ದಾರೆ.
ಇನ್ನು ರಾಜ್ಕುಮಾರ್ ಹಿರಾನಿ ನಿರ್ದೇಶನದ ಡುಂಕಿ ಚಿತ್ರದಲ್ಲಿ ಶಾರುಖ್ ನಟಿಸಲಿದ್ದಾರೆ. ತಾಪ್ಸಿ ಪನ್ನು ಕೂಡ ನಟಿಸಿರುವ ಈ ಚಿತ್ರ ಡಿಸೆಂಬರ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.