
ನಾನು ಎಂದಿಗೂ ಹಿಜಾಬ್ ಅಥವಾ ಬುರ್ಖಾದ ಪರವಾಗಿಲ್ಲ. ನಾನು ಈಗಲೂ ನನ್ನ ಹೇಳಿಕೆಯೊಂದಿಗೆ ನಿಲ್ಲುತ್ತೇನೆ ಎಂದಿರುವ ಅವರು, ಕೇಸರಿ ಶಾಲು ಧರಿಸಿದವರನ್ನ ಗೂಂಡಾಗಳು ಎಂದು ಕರೆದಿದ್ದಾರೆ. ಹುಡುಗಿಯರ ಸಣ್ಣ ಗುಂಪನ್ನು ಬೆದರಿಸಲು ವಿಫಲ ಪ್ರಯತ್ನ ನಡೆಸುತ್ತಿರುವ ಈ ಗೂಂಡಾಗಳ ಗುಂಪುಗಳ ಬಗ್ಗೆ ನನ್ನಲ್ಲಿ ಆಳವಾದ ತಿರಸ್ಕಾರವಿದೆ. ಇದೇನಾ ಅವರ ಪೌರುಷ ಎಂದು ಜಾವೇದ್ ಅಖ್ತರ್ ಲೇವಡಿ ಮಾಡಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ವಿವಾದ ಅಶಾಂತಿ ಹುಟ್ಟಿಸುತ್ತಿದೆ, ವಿದ್ಯಾರ್ಥಿಗಳ ನಡುವೆ ಧಾರ್ಮಿಕ ವಿಷದ ಗೋಡೆ ನಿರ್ಮಾಣವಾಗುತ್ತಿದೆ. ಇಂತಹ ವಿವಾದ ತಮಿಳುನಾಡಿಗೆ ಬರಬಾರದು, ಈ ವೇಳೆ ಪ್ರಗತಿಪರ ಶಕ್ತಿಗಳು ಹೆಚ್ಚು ಜಾಗರೂಕರಾಗಿರಬೇಕು ಎಂದು ತಮಿಳು ನಟ ಕಮಲ್ ಹಾಸನ್ ಟ್ವೀಟ್ ಮಾಡಿದ್ದರು.