ಟೆಸ್ಟ್ ಪಂದ್ಯದಲ್ಲಿ ಅತಿವೇಗವಾಗಿ 100 ವಿಕೆಟ್‍ಗಳನ್ನು ಬಾಚಿಕೊಂಡ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ಬೌಲರ್ ಜಸ್‍ಪ್ರೀತ್ ಬುಮ್ರಾ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್ ಪಂದ್ಯದ ಅಂತಿಮ ದಿನದ ಆಟದಲ್ಲಿ ಒಲ್ಲಿ ಪೋಪ್ ಅವರ ವಿಕೆಟ್ ಪಡೆದು ಬುಮ್ರಾ ಮಹತ್ತರ ಸಾಧನೆ ಮಾಡಿದ್ದಾರೆ.
ಇನ್ನೂ ವಿಶೇಷವೆಂದರೆ, ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಹಾಗೂ ವೇಗದ ಬೌಲರ್ ಕಪಿಲ್ ದೇವ್ ಅವರ ದಾಖಲೆಯನ್ನು ಬುಮ್ರಾ ಮುರಿದಿದ್ದಾರೆ.
25 ಟೆಸ್ಟ್ ಪಂದ್ಯಗಳನ್ನು ಆಡಿ, ಕಪಿಲ್ ದೇವ್ ಅವರು 100 ವಿಕೆಟ್‍ಗಳನ್ನು ಪಡೆದಿದ್ದರು. ಆದರೆ ಬುಮ್ರಾ ಅವರು ಕೇವಲ 24 ಟೆಸ್ಟ್ ಪಂದ್ಯಗಳಲ್ಲೇ 100 ವಿಕೆಟ್ ಉರುಳಿಸಿದ್ದಾರೆ.
ನಂತರದ ದಾಖಲೆಗಳು ಇರ್ಫಾನ್ ಪಠಾಣ್ (28 ಟೆಸ್ಟ್‌ನಲ್ಲಿ 100 ವಿಕೆಟ್), ಜಾವಗಲ್ ಶ್ರೀನಾಥ್ (30 ಟೆಸ್ಟ್‌ಗಳಲ್ಲಿ 100 ವಿಕೆಟ್‍ಗಳು) ಹೆಸರಿನಲ್ಲಿವೆ.
ಟಿ 20 ಸರಣಿಯ ಮೂರನೇ ಪಂದ್ಯ: ಭಾರತದ ವಿರುದ್ಧ ಇಂಗ್ಲೆಂಡ್ ಗೆ ಭರ್ಜರಿ ಜಯ
ಇನ್ನು, ಏಕದಿನ ಪಂದ್ಯಗಳಲ್ಲಿ ಅತಿವೇಗವಾಗಿ 100 ವಿಕೆಟ್‍ಗಳನ್ನು ಬಾಚಿದ ಭಾರತೀಯ ಕ್ರಿಕೆಟ್ ಬೌಲರ್ ಎಂಬ ಖ್ಯಾತಿ ರವಿಚಂದ್ರನ್ ಅಶ್ವಿನ್ ಅವರ ಹೆಸರಿನಲ್ಲಿದೆ. ಕೇವಲ 18 ಪಂದ್ಯಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
https://www.instagram.com/p/CTe3CTzoIT6/?utm_source=ig_embed&ig_rid=82851c89-5d1a-4583-bc30-78ee31ef96d9
https://www.instagram.com/p/CTe0SL2IKdO/?utm_source=ig_embed&ig_rid=d8e90ed5-463c-40f4-a65d-592cd86def01