
ಟಿ ಟ್ವೆಂಟಿ ವಿಶ್ವಕಪ್ ಈ ಬಾರಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ರಾಷ್ಟ್ರಗಳಲ್ಲಿ ನಡೆಯುತ್ತಿದ್ದು. 20 ತಂಡಗಳು ಸೆಣಸಾಡಲು ಸಜ್ಜಾಗಿವೆ. 10 ಸಣ್ಣ ಪುಟ್ಟ ತಂಡಗಳಿಗೆ ಟಿ20 ವಿಶ್ವಕಪ್ ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿದ್ದು, ತಮ್ಮ ಪ್ರತಿಭೆಯನ್ನು ತೋರಿಸಲು ಇದೊಂದು ಒಳ್ಳೆಯ ವೇದಿಕೆಯಾಗಿದೆ.
ವೆಸ್ಟ್ ಇಂಡೀಸ್ ತಂಡದ ಎತ್ತರ ನಿಲುವಿನ ಪ್ರಮುಖ ಆಲ್ರೌಂಡರ್ ಜೇಸನ್ ಹೋಲ್ಡರ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ಟಿ ಟ್ವೆಂಟಿ ವಿಶ್ವಕಪ್ ಗೆ ಆಲಭ್ಯರಾಗಿದ್ದಾರೆ.
ವೆಸ್ಟ್ ಇಂಡೀಸ್ ನ ಅಭಿಮಾನಿಗಳಿಗೆ ಇದು ಬೇಸರ ತಂದಿದ್ದರೆ, ಎದುರಾಳಿ ತಂಡಗಳಿಗೆ ಸಂತಸದ ಸುದ್ದಿಯಾಗಿದೆ. ಇವರ ಬದಲು ಇದೀಗ ಒಬೆಡ್ ಮೆಕಾಯ್ ಕಣಕ್ಕಿಳಿಯುತ್ತಿದ್ದಾರೆ. ವೆಸ್ಟ್ ಇಂಡೀಸ್ ತನ್ನ ಮೊದಲ ಪಂದ್ಯದಲ್ಲಿ ಪಿ ಎನ್ ಜಿ ತಂಡವನ್ನು ಎದುರಿಸಲಿದೆ ವೆಸ್ಟ್ ಇಂಡೀಸ್ ನ ಗಯಾನದಲ್ಲಿ ಈ ಪಂದ್ಯ ನಡೆಯಲಿದೆ.
