
ಪ್ರಪಂಚದಾದ್ಯಂತದ ರೆಸ್ಟೋರೆಂಟ್‌ಗಳು ಗ್ರಾಹಕರನ್ನು ಆಕರ್ಷಿಸಲು ವಿನೂತನ ಥೀಮ್‌ಗಳನ್ನು ಪ್ರಯೋಗಿಸುತ್ತಿರುವಾಗ, ಜಪಾನ್‌ನ ಒಂದು ಉಪಾಹಾರ ಗೃಹವು ಜನರ ಗಮನವನ್ನು ಸೆಳೆಯಲು ವಿಲಕ್ಷಣ ಅಭ್ಯಾಸವನ್ನು ಅಳವಡಿಸಿಕೊಂಡಿತ್ತು.
ನಗೋಯಾದಲ್ಲಿರುವ ಶಚಿಹೊಕೊ-ಯಾ ಎಂಬ ಉಪಾಹಾರ ಗೃಹದಲ್ಲಿ, ಜನರು ತಮ್ಮ ಊಟ ಸೇವಿಸುವ ಮೊದಲು ರೆಸ್ಟೋರೆಂಟ್ ಪರಿಚಾರಕಿಯರಿಂದ ಕಪಾಳಮೋಕ್ಷ ಮಾಡಿಸಿಕೊಳ್ಳುತ್ತಿದ್ದರು. ಸ್ವ ಇಚ್ಚೆಯಿಂದ ಪರಿಚಾರಕಿಯರು ಊಟಕ್ಕೆ ಬರುವ ಗ್ರಾಹಕರಿಗೆ ಕಪಾಳಮೋಕ್ಷ ಮಾಡುತ್ತಿದ್ದರು.
2012 ರಿಂದ ರೆಸ್ಟೋರೆಂಟ್ ಇಂತಹ ವಿಚಿತ್ರ ಆತಿಥ್ಯವನ್ನು ನೀಡುತ್ತಿತ್ತು. ಕೇವಲ 300 ಜಪಾನೀಸ್ ಯೆನ್‌ಗೆ (ರೂ. 170), ನಿಲುವಂಗಿಯನ್ನು ಧರಿಸಿದ ಪರಿಚಾರಿಕೆಯರು ಸಿದ್ಧರಿರುವ ಗ್ರಾಹಕರ ಮುಖಕ್ಕೆ ತಮ್ಮ ಅಂಗೈಗಳಿಂದ ಮತ್ತೆ ಮತ್ತೆ ಕಪಾಳಮೋಕ್ಷ ಮಾಡುತ್ತಾರೆ. ಗ್ರಾಹಕರು ನಿರ್ದಿಷ್ಟ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಲು ವಿನಂತಿಸಿದರೆ 500 ಯೆನ್ (ರೂ. 283) ಹೆಚ್ಚುವರಿ ಶುಲ್ಕವೂ ಇದೆ. ಈ ಸೇವೆಯು ಜನಪ್ರಿಯವಾಗಿತ್ತು.
ಇದೀಗ ಈ ವಿಡಿಯೋ ವ್ಯಾಪಕವಾಗಿ ವೈರಲ್ ಆಗ್ತಿದ್ದಂತೆ ಕಪಾಳಮೋಕ್ಷವನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ರೆಸ್ಟೋರೆಂಟ್ ಇನ್ಮುಂದೆ ಗ್ರಾಹಕರು ಕಪಾಳಮೋಕ್ಷ ಅನುಭವಿಸುವ ನಿರೀಕ್ಷೆಯೊಂದಿಗೆ ರೆಸ್ಟೋರೆಂಟ್ ಗೆ ಭೇಟಿ ನೀಡದಂತೆ ತಿಳಿಸಿದೆ.
