ಜಪಾನ್ ಕಂಪನಿ ಡಿಸ್ಕೋ ಕಾರ್ಪ್, ಕೊರೊನಾ ಸಂದರ್ಭದಲ್ಲಿ ವಿಶಿಷ್ಟ ನಿಯಮಗಳನ್ನು ಜಾರಿಗೆ ತಂದಿದೆ. ಮನೆಯಿಂದ ಕೆಲಸ ಮಾಡುವ ನೌಕರರು ತಮ್ಮ ಸಂಬಳದ ಒಂದು ಭಾಗವನ್ನು ಕಚೇರಿಗೆ ಬರುವ ನೌಕರರಿಗೆ ಪಾವತಿಸುತ್ತಿದ್ದಾರೆ. ಕಚೇರಿಗೆ ಬರುವ ನೌಕರರು ಧೈರ್ಯಶಾಲಿಗಳು. ಈ ಹಣ ಅವರಿಗೆ ಪುರಸ್ಕಾರವೆಂದು ಕಂಪನಿ ಹೇಳಿದೆ.
ಟೋಕಿಯೊ ಮೂಲದ ಈ ಕಂಪನಿ ವಿಭಿನ್ನ ಕೆಲಸ ಮಾಡುವುದ್ರಲ್ಲಿ ಮುಂದಿದೆ. ಸುಮಾರು ಒಂದು ದಶಕದ ಹಿಂದಿನಿಂದಲೇ ಈ ಕಂಪನಿ ತನ್ನದೇ ಆದ ಆಂತರಿಕ ಕರೆನ್ಸಿಯನ್ನು ನಡೆಸುತ್ತಿದೆ. ಇದನ್ನು ವಿಲ್ ಎಂದು ಕರೆಯಲಾಗುತ್ತದೆ. ಕೊರೊನಾ ಬಂದಾಗಿನಿಂದ ಡಿಸ್ಕೋ ತನ್ನ ಎಲ್ಲ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಆಯ್ಕೆ ನೀಡಿದೆ. ಆದ್ರೆ ಕೆಲವರು ಕಾರ್ಖಾನೆಗೆ ಬರುವುದು ಅನಿವಾರ್ಯವಾಗಿದೆ. ಹಾಗಾಗಿ ಕಂಪನಿ, ಮನೆಯಿಂದ ಕೆಲಸ ಮಾಡುವ ನೌಕರರು ಕಚೇರಿಗೆ ಬರುವ ಕಾರ್ಮಿಕರಿಗೆ ನಿಗದಿತ ಮೊತ್ತವನ್ನು ಪಾವತಿಸುವ ವ್ಯವಸ್ಥೆಯನ್ನು ರೂಪಿಸಿದೆ.
ಈ ಕಂಪನಿಯಲ್ಲಿ 5600 ಉದ್ಯೋಗಿಗಳು ಕೆಲಸ ಮಾಡ್ತಿದ್ದಾರೆ. ನೌಕರರ ಮಧ್ಯೆ ಬೇಧಭಾವ ಮಾಡಬಾರದು. ಕಚೇರಿಗೆ ಬರುವವರಿಗೆ ಅಪಾಯ ಹೆಚ್ಚಿರುತ್ತದೆ. ಹಾಗಾಗಿ ಈ ಕ್ರಮಕೈಗೊಂಡಿದ್ದೇವೆಂದು ಕಂಪನಿ ಹೇಳಿದೆ. 1937ರಲ್ಲಿ ಈ ಕಂಪನಿ ಸ್ಥಾಪಿಸಲಾಗಿದೆ.