10 ಜನರಿದ್ದ ಜಪಾನ್ ನ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ (GSDF ) ಹೆಲಿಕಾಪ್ಟರ್ ಗುರುವಾರ ನಾಪತ್ತೆಯಾಗಿದೆ.
ಜಪಾನ್ ಕೋಸ್ಟ್ ಗಾರ್ಡ್ ಮತ್ತು ಇತರ ಮೂಲಗಳ ಪ್ರಕಾರ ಒಕಿನಾವಾ ಸಮುದ್ರ ಪ್ರದೇಶದಲ್ಲಿ ಹೆಲಿಕಾಪ್ಟರ್ ನಾಪತ್ತೆಯಾಗಿದೆ ಎಂದು ವರದಿಯಾಗಿದೆ.
UH60 ವಿವಿಧೋದ್ದೇಶ ಚಾಪರ್ ಸುಮಾರು ಸಂಜೆ 4.40 ಸಮಯದ ವೇಳೆ ರಡಾರ್ನಿಂದ ಕಣ್ಮರೆಯಾಯಿತು ಎಂದು ತಿಳಿದುಬಂದಿದೆ.
ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಹುಡುಕಲು ನಾಲ್ಕು ಗಸ್ತು ಹಡಗುಗಳನ್ನು ತಕ್ಷಣವೇ ಕಳುಹಿಸಲಾಯಿತು.
ಹೆಲಿಕಾಪ್ಟರ್ ನಲ್ಲಿ ಇಬ್ಬರು ಪೈಲಟ್ಗಳು, ಇಬ್ಬರು ಮೆಕ್ಯಾನಿಕ್ಗಳು ಮತ್ತು ಆರು ಸಿಬ್ಬಂದಿ ಇದ್ದರು. ಎಲ್ಲರೂ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ ಸದಸ್ಯರು ಎಂದು GSDF ತಿಳಿಸಿದೆ.