ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರನ್ನು ಪೂರೈಸುವ ಭಾರತದಲ್ಲೇ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆಯಾದ ಕಾವೇರಿ 5ನೇ ಹಂತದ ಯೋಜನೆಗೆ ಇಂದು ಚಾಲನೆ ನೀಡಲಾಯಿತು.
ಉದ್ಘಾಟನೆಗೂ ಮುನ್ನ ಶುಭ ಲಗ್ನದಲ್ಲಿ ಶಾಸ್ತ್ರೋಕ್ತವಾಗಿ ಹೋಮ ನೆರವೇರಿಸಿ, ಗಂಗಾ ಪೂಜೆ ಸಲ್ಲಿಸಿ, ಸಪ್ತ ನದಿಗಳ ನೀರನ್ನು ತಂದು ಪೂಜೆ ನೆರವೇರಿಸಲಾಯಿತು.
ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಮಹತ್ವದ ಯೋಜನೆಗೆ ಆರ್ಥಿಕ ನೆರವು ನೀಡಿದ ಜಪಾನ್ನ JICA – Japan International Cooperation Agency ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಇಂದು ಟಿಕೆ ಹಳ್ಳಿಯಲ್ಲಿ ಸಭೆ ನಡೆಸಿ ಡಿಸಿಎಂ ಡಿಕೆಶಿ ಅವರ ಸಹಕಾರಕ್ಕೆ ಧನ್ಯವಾದ ತಿಳಿಸಿದರು. 775 ಎಂಎಲ್ಡಿ ನೀರನ್ನು ಬೆಂಗಳೂರಿಗೆ ತರುತ್ತಿರುವ ಈ ಯೋಜನೆಯನ್ನು ಮಾರ್ಡನ್ ಇಂಜಿನಿಯರಿಂಗ್ ಮಾರ್ವೆಲ್ ಎನ್ನಬಹುದು. ಇದು ಭಾರತದಲ್ಲೇ ಅತಿ ದೊಡ್ಡ ಕುಡಿಯುವ ನೀರಿನ ಯೋಜನೆಯಾಗಿದೆ ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ.