ಜಪನೀಸ್ ಟೋಕೊ ಎಂಬ ವ್ಯಕ್ತಿ ನಾಯಿಯಾಗಬೇಕೆಂಬ ತನ್ನ ವಿಚಿತ್ರ ಕನಸನ್ನು ನನಸಾಗಿಸಿಕೊಳ್ಳಲು ಬಯಸಿದ್ದ. ಈ ಹಿನ್ನೆಲೆಯಲ್ಲಿ ಆತ ಸುಮಾರು ಎರಡು ಮಿಲಿಯನ್ ಯೆನ್ (ಅಂದಾಜು ರೂ. 12 ಲಕ್ಷ) ಖರ್ಚು ಮಾಡಿದ್ದಾನೆ.
ವೃತ್ತಿಯಲ್ಲಿ ಯೂಟ್ಯೂಬರ್ ಆಗಿರುವ ಟೊಕೊ ಬಾಲ್ಯದಿಂದಲೂ ಪ್ರಾಣಿಯಾಗಬೇಕೆಂದು ಕನಸು ಕಂಡಿದ್ದ. ಈಗ, ಅವನು ತನ್ನ ಇಚ್ಛೆಯನ್ನು ಪೂರೈಸಲು ನಾಯಿಯ ಉಡುಪನ್ನು ಬಳಸುತ್ತಿದ್ದಾನೆ. ವರದಿಯ ಪ್ರಕಾರ, ಟೊಕೊ ತನ್ನ ನಾಯಿಯ ವೇಷಭೂಷಣವನ್ನು ತಿಂಗಳಿಗೆ ಕೆಲವು ಬಾರಿ ಧರಿಸುತ್ತಾನೆ ಮತ್ತು ಅವುಗಳು ತಿನ್ನುವ, ಆಟವಾಡುವ ಅಥವಾ ತರಬೇತಿ ನೀಡುವ ರೀತಿಯನ್ನು ಅನುಸರಿಸುವ ವಿಡಿಯೋಗಳನ್ನು ನಿಯಮಿತವಾಗಿ ಅಪ್‌ಲೋಡ್ ಮಾಡುತ್ತಾನೆ.
ನಾನು ಪ್ರಾಣಿಯಾಗಿದ್ದೇನೆ ಎಂದು ತಿಳಿದಾಗ ನನ್ನ ಸ್ನೇಹಿತರು ಮತ್ತು ಕುಟುಂಬದವರು ತುಂಬಾ ಆಶ್ಚರ್ಯಪಟ್ಟರು. ಆದರೆ ನಾನು ನಾಯಿ ಆಗಿದ್ದೇನೆ. ನಾಯಿಗಳನ್ನು ನಕಲಿಸುವುದನ್ನು ಇಷ್ಟಪಡುತ್ತೇನೆ ಎಂದಿದ್ದಾನೆ ಟೋಕೊ. ನಾಯಿಯಂತೆ ಹೇಗೆ ಉರುಳಬೇಕು, ಹೊಟ್ಟೆಯನ್ನು ಹೇಗೆ ಉಜ್ಜಬೇಕು, ಕುಳಿತುಕೊಳ್ಳುವುದು ಹೇಗೆ ಎಂಬಿತ್ಯಾದಿಯನ್ನು ಕಲಿಸಿದ್ದಾನೆ. ಈತನ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ಪಡುತ್ತಿದ್ದಾರೆ.