ಟೋಕಿಯೊ: ಜಪಾನ್ ನಲ್ಲಿ ತಿಮಿಂಗಿಲ ಮಾಂಸ ಮಾರಾಟಕ್ಕಾಗಿ ಯಂತ್ರಗಳನ್ನು ಬಳಸುತ್ತಿರುವ ಆತಂಕದ ಘಟನೆ ನಡೆದಿದೆ. ಇದರ ಮಾಂಸದ ಮಾರಾಟದ ಕುರಿತು ವಿವಾದ ಎದ್ದಿದ್ದ ಹಿನ್ನೆಲೆಯಲ್ಲಿ ಈಗ ಗ್ರಾಹಕರನ್ನು ಸೆಳೆಯಲು ಮತ್ತು ಮಾರಾಟವನ್ನು ಹೆಚ್ಚಿಸಲು ಹೊಸ ಮಾರ್ಗವನ್ನು ಕಂಡುಕೊಂಡಿರುವ ತಿಮಿಂಗಲ ಮಾಂಸ ಮಾರಾಟಗಾರರು, ಈಗ ಯಂತ್ರಗಳನ್ನು ಪ್ರಾರಂಭಿಸಿದ್ದಾರೆ.
ಕುಜಿರಾ (ವೇಲ್) ಸ್ಟೋರ್ ಎನ್ನುವುದು ಟೋಕಿಯೊ ಬಳಿಯ ಯೊಕೊಹಾಮಾ ಬಂದರು ಪಟ್ಟಣದಲ್ಲಿ ಇತ್ತೀಚೆಗೆ ತೆರೆಯಲಾದ ಮಾನವರಹಿತ ಔಟ್‌ಲೆಟ್. ತಿಮಿಂಗಿಲ ಸಾಶಿಮಿ, ತಿಮಿಂಗಿಲ ಬೇಕನ್, ತಿಮಿಂಗಿಲ ಚರ್ಮ ಮತ್ತು ತಿಮಿಂಗಿಲ ಸ್ಟೀಕ್‌ಗಾಗಿ ಮೂರು ಯಂತ್ರಗಳನ್ನು ಇಲ್ಲಿ ಇಡಲಾಗಿದೆ. ತಿಮಿಂಗಿಲ ಮಾಂಸವನ್ನು 1,000 ಯೆನ್‌ನಿಂದ (sumAru 628 ರೂ)ನಿಂದ 3,000 ಯೆನ್ವರೆಗೆ (ಸುಮಾರು 1883 ರೂ.) ಮಾರಾಟ ಮಾಡಲಾಗುತ್ತಿದೆ.
ತಿಮಿಂಗಿಲ ಮಾಂಸವು ಬಹಳ ಹಿಂದಿನಿಂದಲೂ ವಿವಾದದ ಮೂಲವಾಗಿದೆ. ಆದರೆ ಈ ಹೊಸ ವಿತರಣಾ ಯಂತ್ರಗಳಲ್ಲಿನ ಮಾರಾಟವು ಸದ್ದಿಲ್ಲದೆ ಉತ್ತಮ ಆರಂಭವನ್ನು ಪಡೆದುಕೊಂಡಿದೆ ಎಂದು ನಿರ್ವಾಹಕರು ಹೇಳುತ್ತಾರೆ. ಮೂರು ವರ್ಷಗಳ ಹಿಂದೆ ತಿಮಿಂಗಲ ಬೇಟೆಯು ಭಾರಿ ವಿವಾದಕ್ಕೆ ಒಳಗಾಗಿತ್ತು. ಆದರೆ ನಂತರ ಅದರ ಬೇಟೆಗೆ ಅವಕಾಶ ಕಲ್ಪಿಸಲಾಗಿದ್ದು, ಇದೀಗ ಮಾಂಸ ಅವ್ಯಾಹತವಾಗಿ ಮಾರಾಟವಾಗುತ್ತಿದೆ.
ಐದು ವರ್ಷಗಳಲ್ಲಿ ದೇಶದಾದ್ಯಂತ 100 ಸ್ಥಳಗಳಿಗೆ ವಿತರಣಾ ಯಂತ್ರಗಳನ್ನು ವಿಸ್ತರಿಸಲು ಕ್ಯೋಡೋ ಸೆನ್ಪಾಕು ಆಶಿಸಿದ್ದಾರೆ ಎಂದು ಕಂಪನಿಯ ವಕ್ತಾರ ಕೊನೊಮು ಕುಬೊ ಅಸೋಸಿಯೇಟೆಡ್ ತಿಳಿಸಿದ್ದಾರೆ.