alex Certify BIG NEWS: ಭೂಕಂಪದ ನಡುವೆ ಸುನಾಮಿ ಎಚ್ಚರಿಕೆ ನೀಡಿದ ಜಪಾನ್ ಸರ್ಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭೂಕಂಪದ ನಡುವೆ ಸುನಾಮಿ ಎಚ್ಚರಿಕೆ ನೀಡಿದ ಜಪಾನ್ ಸರ್ಕಾರ

ಟೊಕ್ಯೊ: ಹೊಸ ವರ್ಷದ ಮೊದಲ ದಿನವೇ ಜಪಾನ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಜನರು ತತ್ತರಿಸಿದ್ದಾರೆ. ಈ ನಡುವೆ ಜಪಾನ್ ಸರ್ಕಾರ ಸುನಾಮಿ ಎಚ್ಚರಿಕೆಯನ್ನು ನೀಡಿದ್ದು, ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಜಪಾನ್ ನ ಪಶ್ಚಿಮ ಭಾಗದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.6ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪದ ಭೀಕರತೆಗೆ ಕಟ್ಟಡಗಳು, ಮನೆಯಗಳಲ್ಲಿರುವ ವಸ್ತುಗಳು ನಡುಗಿವೆ. ಆತಂಕದಲ್ಲಿ ಜನರು ಕಟ್ಟಡಗಳಿಂದ ಹೊರಗೋಡಿ ಬಂದಿದ್ದಾರೆ.

ಈ ಮಧ್ಯೆ ಜಪಾನ್ ಸರ್ಕಾರ ಸುನಾಮಿ ಎಚ್ಚರಿಕೆ ನೀಡಿದೆ. ಇತಿಕಾವಾ ಪ್ರದೇಶದಲ್ಲಿ ಸಮುದ್ರದ ಆರ್ಭಟ ಜೋರಾಗಲಿದ್ದು 5 ಮೀಟರ್ ಎತ್ತರದವರೆಗೆ ಬೃಹತ್ ಅಲೆಗಳು ಏಳುವ ಸಾಧ್ಯತೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...