ಭಾರತದಲ್ಲಿ ರೈಲುಗಳು ತಡವಾಗಿ ಬರುವುದು ಸಾಮಾನ್ಯ ಸಂಗತಿ. ಕೆಲವು ದೇಶಗಳಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಓಡಾಡುತ್ತವೆ. ಸಮಯಕ್ಕೆ ಸರಿಯಾಗಿ ಓಡುವ ರೈಲುಗಳಲ್ಲಿ ಜಪಾನ್ನ ಬುಲೆಟ್ ರೈಲು ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. ಕೇವಲ ಒಂದು ನಿಮಿಷ ರೈಲು ವಿಳಂಬವಾಗಿ ಬಂದ ಕಾರಣ ತಜ್ಞರು ತನಿಖೆ ನಡೆಸಿದ್ದಾರೆ.
ರೈಲಿನ ಚಾಲಕ ಶೌಚಾಲಯಕ್ಕೆ ಹೋದ ಕಾರಣ ರೈಲು ತಡವಾಗಿ ಬಂದಿದೆ ಎಂಬ ಸಂಗತಿ ಗೊತ್ತಾಗಿದೆ. ವಿಚಾರಣೆ ವೇಳೆ ಚಾಲಕ ಈ ವಿಷ್ಯವನ್ನು ಹೇಳಿದ್ದಾನೆ. ಹೊಟ್ಟೆ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡಿತು. ಹಾಗಾಗಿ ತರಬೇತಿ ಪಡೆದ ಕಂಡಕ್ಟರ್ ಗೆ ಜವಾಬ್ದಾರಿ ನೀಡಿ ಶೌಚಾಲಯಕ್ಕೆ ತೆರಳಿದ್ದೆ ಎಂದಿದ್ದಾನೆ. ಚಾಲಕನಿಲ್ಲದೆ ರೈಲು 3 ನಿಮಿಷ ಚಲಿಸಿದೆ.
ತರಬೇತಿ ಪಡೆಯದ ಕಂಡಕ್ಟರ್ಗೆ 160 ಪ್ರಯಾಣಿಕರನ್ನು ಹೊತ್ತ ರೈಲನ್ನು ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಓಡಿಸಿದ್ದಾನೆ. ಈ ಬುಲೆಟ್ ರೈಲುಗಳು ಕಂಪ್ಯೂಟರ್ ನಿಯಂತ್ರಣದಲ್ಲಿರುತ್ತವೆ. ಪ್ರಯಾಣಿಕರ ಸುರಕ್ಷತೆಗಾಗಿ ಅಗತ್ಯವಿದ್ದಾಗ ಬ್ರೇಕ್ಗಳನ್ನು ಹಾಕಲಾಗುತ್ತದೆ. ರೈಲಿನ ವೇಗವನ್ನು ಹೆಚ್ಚಿಸುವುದು ಚಾಲಕನ ಕೆಲಸ. ಒಂದು ವೇಳೆ ರೈಲು ಸಮಯಕ್ಕೆ ತಲುಪಿದ್ದರೆ ಈ ಸಂಗತಿ ಹೊರಗೆ ಬರ್ತಿರಲಿಲ್ಲ. ಪ್ರೋಟೋಕಾಲ್ ಪ್ರಕಾರ, ಚಾಲಕನು ಆಜ್ಞಾ ಕೇಂದ್ರದೊಂದಿಗೆ ಮಾತನಾಡಬೇಕು ಮತ್ತು ರೈಲಿನ ನಿಯಂತ್ರಣವನ್ನು ಅರ್ಹ ಕಂಡಕ್ಟರ್ಗೆ ಹಸ್ತಾಂತರಿಸಬೇಕು. ಆದ್ರೆ ಮುಜುಗರದಿಂದಾಗಿ ಹೇಳಿರಲಿಲ್ಲವೆಂದು ಚಾಲಕ ಒಪ್ಪಿಕೊಂಡಿದ್ದಾನೆ.