alex Certify ಕಾಶಿಯಲ್ಲಿ ಗೋಲ್ಗಪ್ಪಾ, ಬನಾರಸಿ ಥಾಲಿ ಸವಿದ ಜಪಾನಿ ರಾಯಭಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಶಿಯಲ್ಲಿ ಗೋಲ್ಗಪ್ಪಾ, ಬನಾರಸಿ ಥಾಲಿ ಸವಿದ ಜಪಾನಿ ರಾಯಭಾರಿ

ದೇಶದುದ್ದಗಲಕ್ಕೂ ಜನಪ್ರಿಯವಾದ ಪಾನಿ ಪೂರಿಯನ್ನು ಭಾರತಕ್ಕೆ ಭೇಟಿ ಕೊಡುವ ವಿದೇಶಿಗರೂ ಸಹ ಸವಿಯುತ್ತಾರೆ. ಖಟ್ಟಾ-ಮೀಠಾ ನೀರಿನೊಂದಿಗೆ ಪೂರಿಯಲ್ಲಿ ಹಾಕಿಕೊಡುವ ಥರಾವರಿ ರುಚಿಯ ಸ್ವಾದ ಎಂಥವನ್ನೂ ಹಿಡಿದಿಡುತ್ತದೆ.

ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಜಪಾನ್ ಪ್ರಧಾನ ಮಂತ್ರಿ ಫುಮಿಯೋ ಕಿಶಿಡಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಹ ಈ ಜನಪ್ರಿಯ ಸ್ಟ್ರೀಟ್ ಫುಡ್ ಸವಿದಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು.

ಭಾರತಕ್ಕೆ ಜಪಾನ್ ರಾಯಭಾರಿಯಾಗಿರುವ ಹಿರೋಶಿ ಸುಜ಼ುಕಿ ಇತ್ತೀಚೆಗೆ ವಾರಣಾಸಿಗೆ ಭೇಟಿ ನೀಡಿದ್ದರು. ಪ್ರಧಾನಿ ಮೋದಿ ಸ್ವಕ್ಷೇತ್ರದಲ್ಲಿ ಜನಪ್ರಿಯವಾಗಿರುವ ಈ ಖಾದ್ಯವನ್ನು ಸವಿಯುವ ತಮ್ಮ ಬಯಕೆಯನ್ನು ತಮ್ಮ ದೇಶದ ಪ್ರಧಾನಿ ಕಳೆದ ಬಾರಿ ಭಾರತಕ್ಕೆ ಭೇಟಿ ಕೊಟ್ಟಾಗಿನಿಂದಲೂ ಹೇಳಿಕೊಂಡಿದ್ದರು ಸುಜ಼ುಕಿ.

ತನ್ನ ಕಾಶಿ ಭೇಟಿ ಸಂದರ್ಭದಲ್ಲಿ ಈ ಇಚ್ಛೆಯನ್ನು ಈಡೇರಿಸಿಕೊಂಡಿದ್ದಾರೆ ಸುಜ಼ುಕಿ, ಗೋಲ್‌ಗಪ್ಪಾ ಸವಿದು, ’’ಆಲೂಗೆಡ್ಡೆಯ ಸ್ವಾದಗಳು ಬಾಯಿ ತುಂಬುತ್ತಿವೆ, ಬಹಳ ಟೇಸ್ಟಿಯಾಗಿದೆ,” ಎಂದು ಹೇಳಿಕೊಂಡಿದ್ದಾರೆ.

ಇದರ ಬೆನ್ನಿಗೇ ಕಾಶಿಯ ಜನಪ್ರಿಯ ಗಂಗಾ ಆರತಿಯನ್ನು ನೋಡಿದ ಬಳಿಕ ರಾತ್ರಿ ಭೋಜನಕ್ಕೆ ಬನಾರಸಿ ಥಾಲಿ ಭೋಜನ ಸವಿದಿದ್ದಾರೆ ಸುಜ಼ುಕಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...