alex Certify ಜನ್ಮಾಷ್ಟಮಿ ಸ್ಪೆಷಲ್​: ‘ಮಚ್​ ಗಯಾ ಶೋರ್’​ ನುಡಿಸಿದ ಮುಂಬೈ ಪೊಲೀಸ್​ ಬ್ಯಾಂಡ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನ್ಮಾಷ್ಟಮಿ ಸ್ಪೆಷಲ್​: ‘ಮಚ್​ ಗಯಾ ಶೋರ್’​ ನುಡಿಸಿದ ಮುಂಬೈ ಪೊಲೀಸ್​ ಬ್ಯಾಂಡ್​

ಮುಂಬೈ ಪೊಲೀಸರ ಸಾಮಾಜಿಕ ಜಾಲತಾಣ ಹ್ಯಾಂಡಲ್​ ಹಾಸ್ಯದ ಪ್ರತಿಕ್ರಿಯೆಗಳು ಮತ್ತು ಜಾಗೃತಿ ಮೂಡಿಸಲು ಹಾಸ್ಯಮಯ ವಿಧಾನಕ್ಕೆ ಹೆಸರುವಾಸಿಯಾಗಿದೆ. ಅದರ ಇತ್ತೀಚಿನ ಪೋಸ್ಟ್​ನಲ್ಲಿ ಇಲಾಖೆಯು ತನ್ನ ಬ್ಯಾಂಡ್​ ತಂಡದ ಕೌಶಲ್ಯತೆಯನ್ನು ಹಂಚಿಕೊಂಡಿದೆ.

ಟ್ವಿಟರ್​ ಮತ್ತು ಯೂಟ್ಯೂಬ್​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಅವರ ಪೊಲೀಸ್​ ಬ್ಯಾಂಡ್​ ಜನ್ಮಾಷ್ಟಮಿ ಸಂದರ್ಭದಲ್ಲಿ ಅಮಿತಾಬ್​ ಬಚ್ಚನ್​ ಅವರ ‘ಮಚ್​ ಗಯಾ ಶೋರ್​’ ಅನ್ನು ನುಡಿಸುವುದನ್ನು ಕಾಣಬಹುದು.

ಪೂರ್ವಸಿದ್ಧತೆಯಿಲ್ಲದ ‘ಮಚ್​ ಗಯಾ ಶೋರ್​’ ಪ್ರಸ್ತುತಪಡಿಸಲಾಗಿದೆ ಎಂದು ವೀಡಿಯೊದ ಶೀರ್ಷಿಕೆ ಇದೆ.

ವಿಡಿಯೋದಲ್ಲಿ, ಅಧಿಕಾರಿಗಳು ಕ್ಲಾರಿನೆಟ್​, ಟ್ರಂಪೆಟ್​, ಸ್ಯಾಕ್ಸೋಫೋನ್​ ಮತ್ತು ಟ್ರಂಬೋನ್​ನಂತಹ ಹಲವಾರು ವಾದ್ಯಗಳೊಂದಿಗೆ ಸಾಂಪ್ರದಾಯಿಕ ಥೀಮ್​ ನಲ್ಲಿ ನುಡಿಸುವುದನ್ನು ಕಾಣಬಹುದು. ವಿಡಿಯೋಗೆ ಪ್ರತಿಕ್ರಿಯಿಸಿದ ಟ್ವಿಟರ್​ ಬಳಕೆದಾರರು ಅಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.

ಈ ಹಿಂದೆ, ಖಾಕಿ ಸ್ಟುಡಿಯೋ ಮಾಂಟಿ ನಾರ್ಮನ್​ ಅವರ ‘ಜೇಮ್ಸ್​ ಬಾಂಡ್​ ಥೀಮ್​’ ಅನ್ನು ನುಡಿಸಿತ್ತು. ಈ ವರ್ಷದ ಹೋಳಿಯಲ್ಲಿ, ಖಾಕಿ ಸ್ಟುಡಿಯೋವು ಹೋಳಿಯ ಗೀತೆಗಳೆಂದು ಸುಲಭವಾಗಿ ಹೇಳಬಹುದಾದ ಹಾಡುಗಳನ್ನು ಪ್ರದರ್ಶಿಸಿತ್ತು.

https://twitter.com/MumbaiPolice/status/1560468285040119808?ref_src=twsrc%5Etfw%7Ctwcamp%5Etweetembed%7Ctwterm%5E1560468285040119808%7Ctwgr%5Eb2c3abc2197a418305a9e10aa91de06a9bf2b05c%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fjanamashtami-special-mumbai-police-band-plays-mach-gaya-shor-video-goes-viral-5780083.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...