ಲತೆಯಂತಹ ಮೈಮಾಟ ಹೊಂದಿರುವ ಯುವ ನಟಿ ಹಾಗೂ ನಟಿ ಶ್ರೀದೇವಿಯ ಪುತ್ರಿ ಜಾಹ್ನವಿ ಕಪೂರ್ ಅವರ ಇತ್ತೀಚಿನ ಫೋಟೊಶೂಟ್ ಭಾರಿ ವೈರಲ್ ಆಗಿದೆ. ಕಪ್ಪನೆಯ ಸಿಕ್ವಿನ್ ಡ್ರೆಸ್‌ನ ನಡುವೆ ಮಿನುಗುವ ಸಣ್ಣ ನಕ್ಷತ್ರದಂತಹ ಬಟ್ಟೆಯನ್ನು ಧರಿಸಿ, ಬಿಚ್ಚುಗೂದಲಿನಲ್ಲಿ ಬಹಳ ಮೋಹಕವಾಗಿ ಜಾಹ್ನವಿ ಕಾಣಿಸಿಕೊಂಡಿದ್ದಾರೆ.
ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ನೈಕಾ ಲಿಕ್ವಿಡ್ ಲಿಪ್‌ಸ್ಟಿಕ್ ಗಾಗಿ ನಡೆದಿರುವ ಫೋಟೊ ಶೂಟ್ ಇದು. ಅದರ ಕೆಲವು ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಕೂಡ ಹಂಚಿಕೊಂಡು, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ ಜಾಹ್ನವಿ.
ಒಡೆದ ಹಾಲಿನಿಂದ ಮಾಡಿ ರುಚಿ ರುಚಿ, ಆರೋಗ್ಯಕರ ತಿನಿಸು
ಬಹಳ ವೃತ್ತಿಪರ ಮಾಡೆಲ್‌ನಂತೆ ಪೋಸ್ ಕೊಟ್ಟಿರುವ ಜಾಹ್ನವಿಯ ನಡೆಗಳಿಗೆ ಫಾಲೋವರ್ಸ್‌ಗಳಿಂದ ಮೆಚ್ಚುಗೆ ಮಹಾಪೂರ ಹರಿದುಬಂದಿದೆ.
ಇನ್ನು, ಸಿನಿಮಾಗಳ ಸುದ್ದಿಗೆ ಬಂದರೆ ಜಾಹ್ನವಿ ತೆಕ್ಕೆಯಲ್ಲಿ ಒಟ್ಟು ಮೂರು ಸಿನಿಮಾಗಳಿದ್ದು ಚಿತ್ರೀಕರಣವು ಸಾಗುತ್ತಿದೆ. ದೋಸ್ತಾನ-2, ಗುಡ್‌ಲಕ್ ಜೆರ್ರಿ ಮತ್ತು ತಖ್ತ್‌ನಲ್ಲಿ ಜಾಹ್ನವಿ ವಿಭಿನ್ನ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
https://www.instagram.com/p/CTmLpz-F_yy/?utm_source=ig_web_copy_link