ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಸುಧಾರಣಾ ಕಾನೂನುಗಳನ್ನು ಹಿಂಪಡೆದು ತಿಂಗಳು ಕಳೆದರೂ ಸಹ ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶಗಳಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸಂಬಂಧ ಹೋರಾಟಗಳು ತಣ್ಣಗಾಗುವ ಸಾಧ್ಯತೆ ಕಾಣುತ್ತಿಲ್ಲ.
ಹರಿಯಾಣದ ಮದುಮಗನೊಬ್ಬ ತನ್ನ ಮದುವೆಯ ಆಮಂತ್ರಣ ಪತ್ರದ ಮೇಲೆ ಬೆಳೆ ಉತ್ಪನ್ನಗಳಿಗೆ ಕನಿಷ್ಠ ಬೆಂಬಲಕ್ಕೆ ಆಗ್ರಹಿಸಿ ಘೋಷ ವಾಕ್ಯವೊಂದನ್ನು ಪ್ರಿಂಟ್ ಮಾಡಿಸಿದ್ದಾರೆ.
ನಾಯಿ ಸಾಕ್ತೀರಾ…? ಹಾಗಾದ್ರೆ ಹೀಗಿರಲಿ ಅವುಗಳ ಲಾಲನೆ – ಪಾಲನೆ
1500 ಆಮಂತ್ರಣ ಕಾರ್ಡ್‌ಗಳ ಮೇಲೆ “ಹೋರಾಟ ಈಗಲೂ ಜಾರಿಯಲ್ಲಿದೆ, ಈ ಬಾರಿ ಕನಿಷ್ಠ ಬೆಂಬಲ ಬೆಲೆಗೆ’ ಎಂದು ಘೋಷವಾಕ್ಯ ಹಾಕಿಸಲಾಗಿದ್ದು, ಟ್ರಾಕ್ಟರ್ ಚಿತ್ರದೊಂದಿಗೆ ’ರೈತನಿಲ್ಲದೇ ಊಟವಿಲ್ಲ’ ಎಂಬ ಬರಹವನ್ನು ಸಹ ಬರೆಯಿಸಿದ್ದಾರೆ.
“ರೈತರ ಹೋರಾಟದ ವಿಜಯ ಇನ್ನೂ ಸಂಪೂರ್ಣವಾಗಿಲ್ಲ ಎಂಬ ಸಂದೇಶವನ್ನು ನಾನು ನನ್ನ ಮದುವೆ ಆಮಂತ್ರಣದೊಂದಿಗೆ ಕಳುಹಿಸಲು ಇಚ್ಛಿಸುತ್ತೇನೆ. ಈ ವಿಚಾರವಾಗಿ ಕನಿಷ್ಠ ಬೆಂಬಲ ಬೆಲೆ ಕಾನೂನಿನ ಅಡಿ ಸರ್ಕಾರವು ರೈತರಿಗೆ ಲಿಖಿತ ರೂಪದಲ್ಲಿ ಬರೆದು ಕೊಟ್ಟ ಮೇಲಷ್ಟೇ ರೈತರ ಗೆಲುವನ್ನು ಘೋಷಿಸಲಾಗುವುದು. ಎಂಎಸ್‌ಪಿ ಇಲ್ಲದೇ ರೈತರಿಗೆ ಏನೂ ಸಿಗುವುದಿಲ್ಲ ಮತ್ತು ಎಂಎಸ್‌ಪಿಗೆ ಶಾಸನಾತ್ಮಕ ಖಾತ್ರಿ ಸಿಕ್ಕ ಮೇಲಷ್ಟೇ ರೈತರ ತ್ಯಾಗಗಳಿಗೆ ಅರ್ಥ ಸಿಗುತ್ತದೆ,” ಎನ್ನುತ್ತಾರೆ ಮದುಮಗ ಪ್ರದೀಪ್ ಕಾಲಿರಾಮನ.