ಬೆಂಗಳೂರು: ನನಗೆ ಯಾರ ಬಗ್ಗೆಯೂ ಚಾಡಿ ಹೇಲುವ ಅವಶ್ಯಕತೆ ಇಲ್ಲ. ಶ್ರೀರಾಮುಲು ಬಗ್ಗೆಯೂ ನಾನು ಚಾಡಿ ಹೇಳಿಲ್ಲ ಎಂದು ಗಂಗಾವತಿ ಶಾಸಕ ಜನಾರ್ಧನ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಡಿದ ಜನಾರ್ಧನ ರೆಡ್ಡಿ, ಸಂಡೂರು ಉಪಚುನಾವಣೆಯಲ್ಲಿ ಬಂಗಾರು ಹನುಮಂತುಗೆ ಟಿಕೆಟ್ ಕೊಡಿಸಿದ್ದು ನಾನಲ್ಲ. ಪಕ್ಷವೇ ಬಂಗಾರು ಹನುಮಂತುಗೆ ಟಿಕೆಟ್ ನೀಡಿದೆ. ಉಪಚುನಾವಣೆಯಲ್ಲಿ ಯಾಕೆ ಸೋಲಾಗಿದೆ ಎಂಬುದು ಗೊತ್ತು. ನಾನು ಯಾವ ವರಿಷ್ಠರ ಬಳಿಯೂ ಶ್ರೀರಾಮುಲು ಬಗ್ಗೆ ಚಾಡಿ ಹೇಳಿಲ್ಲ. ಆರೋಪವನ್ನೂ ಮಾಡಿಲ್ಲ ಎಂದು ಹೇಳಿದರು.
ರಾಮುಲು ನನ್ನ ಮೇಲೆ ವರಿಷ್ಠರಿಗೆ ಹೇಳಿಕೊಟ್ಟಿದ್ದೇನೆ ಎಂದಿದ್ದಾರೆ. ಆದರೆ ನಾನು ಯಾವುದೇ ವರಿಷ್ಠರಿಗೂ ಚಾಡಿ ಹೇಳಿಲ್ಲ, ನನಗೆ ಅದರ ಅವಶ್ಯಕತೆಯೂ ಇಲ್ಲ. ಇನ್ನು ಶ್ರೀರಾಮುಲು ಪಕ್ಷವನ್ನು ಬಿಡುತ್ತೇನೆ ಎಂದು ಹೇಳುವುದು ಇದೇ ಹೊಸದೇನಲ್ಲ. ಹಲವು ಬಾರಿ ಅವರು ಈ ಮಾತು ಹೇಳಿದ್ದಾರೆ ಎಂದು ಟಾಂಗ್ ನೀಡಿದರು.