ಪ್ರಧಾನ್ ಮಂತ್ರಿ ಜನ ಧನ್ ಯೋಜನೆ ಅಡಿಯಲ್ಲಿ, ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯ ಬ್ಯಾಲೆನ್ಸ್ ಮೇಲೆ ಖಾತೆ ತೆರೆಯಬಹುದು. ಬಡವರಿಗಾಗಿ ಸರ್ಕಾರ ಈ ಸೌಲಭ್ಯ ನೀಡಿದೆ. ಈ ಯೋಜನೆಯಡಿ ಜನರಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ. ಮನೆಯಲ್ಲಿ ಕುಳಿತುಕೊಂಡು ಜನ್ ಧನ್ ಖಾತೆಯ ಬ್ಯಾಲೆನ್ಸ್ ಸುಲಭವಾಗಿ ಪರಿಶೀಲಿಸಬಹುದು.
ಜನ್ ಧನ್ ಖಾತೆ ಎಸ್ಬಿಐನಲ್ಲಿದ್ದರೆ 18004253800 ಅಥವಾ 1800112211 ಗೆ ಕರೆ ಮಾಡಬಹುದು. ನಿಮ್ಮ ಭಾಷೆಯನ್ನು ಆರಿಸಿ, ಕೊನೆಯ ಐದು ವಹಿವಾಟುಗಳನ್ನು ತಿಳಿಯಲು ಒಂದನ್ನು ಒತ್ತಬೇಕು. ಆಗ ನಿಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ತಿಳಿಯಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆದಾರರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 92237 66666 ಗೆ ಕರೆ ಮಾಡುವ ಮೂಲಕವೂ ಬ್ಯಾಲೆನ್ಸ್ ಚೆಕ್ ಮಾಡಬಹುದು.
ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 18001802223 ಅಥವಾ 01202303090 ಗೆ ಮಿಸ್ಡ್ ಕಾಲ್ ಮಾಡುವ ಮೂಲಕ ಅಥವಾ ಎಸ್ಎಂಎಸ್ ಮೂಲಕ ಬ್ಯಾಲೆನ್ಸ್ ಪರಿಶೀಲಿಸಬಹುದು. ಖಾತೆಗೆ ಮೊಬೈಲ್ ಲಿಂಕ್ ಆಗದೆ ಹೋದಲ್ಲಿ ಹತ್ತಿರದ ಶಾಖೆಗೆ ಭೇಟಿ ನೀಡಿ ಮೊಬೈಲ್ ನಂಬರ್ ಲಿಂಕ್ ಮಾಡಬೇಕು.
ಐಸಿಐಸಿಐ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರೆ ಬ್ಯಾಲೆನ್ಸ್ ತಿಳಿಯಲು 9594612612 ನಂಬರ್ ಗೆ ಮಿಸ್ಡ್ ಕಾಲ್ ನೀಡಬಹುದು. ಗ್ರಾಹಕರು ತಮ್ಮ ಖಾತೆಯ ಬಾಕಿ ಮಾಹಿತಿಯನ್ನು ತಿಳಿಯಲು ಐಬಿಎಎಲ್ ಎಂದು ಬರೆದು 9215676766 ಗೆ ಸಂದೇಶ ಕಳುಹಿಸಬಹುದು.
ಎಚ್ಡಿಎಫ್ಸಿ ಬ್ಯಾಂಕ್ ಖಾತೆದಾರರು ಬಾಕಿ ಪರಿಶೀಲನೆಗಾಗಿ ಟೋಲ್ ಫ್ರೀ ಸಂಖ್ಯೆ 18002703333ಗೆ ಮತ್ತು ಮಿನಿ ಸ್ಟೇಟ್ಮೆಂಟ್ಗೆ 18002703355ಗೆ ಹಾಗೂ ಚೆಕ್ ಬುಕ್ ಗಾಗಿ 18002703366ಗೆ ಕರೆ ಮಾಡಬೇಕು.
ಬ್ಯಾಂಕ್ ಆಫ್ ಇಂಡಿಯಾದ ಖಾತೆದಾರರು ಬ್ಯಾಲೆನ್ಸ್ ತಿಳಿಯಲು 09015135135 ಗೆ ಮಿಸ್ ಕಾಲ್ ನೀಡಬೇಕು.
ಆಕ್ಸಿಸ್ ಬ್ಯಾಂಕ್ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 18004195959 ಗೆ ಕರೆ ಮಾಡಿ ಬ್ಯಾಲೆನ್ಸ್ ಪರಿಶೀಲಿಸಬಹುದು.