ಜನ್ ಧನ್ ಖಾತೆ ತೆರೆದಿರುವ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಬಡವರು, ಬ್ಯಾಂಕ್, ಅಂಚೆ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಶೂನ್ಯ ಬ್ಯಾಲೆನ್ಸ್ ನಲ್ಲಿ ಜನ್ ಧನ್ ಖಾತೆಯನ್ನು ತೆರೆಯಬಹುದಾಗಿದೆ. ಈ ಯೋಜನೆಯಡಿ, ಗ್ರಾಹಕರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಖಾತೆಯಲ್ಲಿ ಹಣ ಎಷ್ಟಿದೆ ಎಂಬುದನ್ನು ತಿಳಿಯಲು, ಮಿಸ್ಡ್ ಕಾಲ್ ನೀಡುವ ಮೂಲಕ ತಿಳಿಯಬಹುದಾಗಿದೆ.
ಜನ್ ಧನ್ ಖಾತೆ ಬ್ಯಾಲೆನ್ಸ್, ಎರಡು ರೀತಿಯಲ್ಲಿ ಪರಿಶೀಲಿಸಬಹುದು. ಮಿಸ್ಡ್ ಕಾಲ್ ನೀಡುವ ಮೂಲಕ ಹಾಗೂ ಪಿಎಫ್ಎಂಎಸ್ ಪೋರ್ಟಲ್ ಮೂಲಕ ಪತ್ತೆ ಮಾಡಬಹುದು. ಪೋರ್ಟಲ್ನಿಂದ ಬ್ಯಾಲೆನ್ಸ್ ತಿಳಿಯಲು, ಮೊದಲು https://pfms.nic.in/NewDefaultHome.aspx#. ಗೆ ಹೋಗಬೇಕು. ಪಾವತಿಯನ್ನು ತಿಳಿಯಿರಿ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಖಾತೆ ಸಂಖ್ಯೆಯನ್ನು ನಮೂದಿಸಬೇಕು. ಖಾತೆ ಸಂಖ್ಯೆಯನ್ನು ಎರಡು ಬಾರಿ ನಮೂದಿಸಬೇಕು. ನಂತ್ರ ಕ್ಯಾಪ್ಚಾ ಕೋಡ್ ಭರ್ತಿ ಮಾಡಬೇಕು.
ಮಿಸ್ಡ್ ಕಾಲ್ ಮೂಲಕ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜನ್ ಧನ್ ಖಾತೆಯನ್ನು ಹೊಂದಿದ್ದರೆ, ಮಿಸ್ಡ್ ಕಾಲ್ ಮೂಲಕ ಬ್ಯಾಲೆನ್ಸ್ ಪರಿಶೀಲಿಸಬಹುದು. ಇದಕ್ಕಾಗಿ 18004253800 ಅಥವಾ 1800112211 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬೇಕು.