ಶ್ರೀನಗರ: ಉಗ್ರರಿಂದ ಅಪಹರಿಸಲ್ಪಟ್ಟಿದ್ದ ಇಬ್ಬರು ಯೋಧರ ಪೈಕಿ ಓರ್ವ ಯೋಧ ಶವವಾಗಿ ಪತ್ತೆಯಾಗಿದ್ದು, ಗುಂಡಿಟ್ಟು ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ.
ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಉಗ್ರರು ಇಬ್ಬರು ಭರತೀಯ ಯೋಧರನ್ನು ಅಪಹರಿಸಿದ್ದರು ಎನ್ನಲಾಗಿದೆ. ಇದೀಗ ಓರ್ವ ಯೋಧ ಶವವಾಗಿ ಪತ್ತೆಯಾಗಿದ್ದಾರೆ. ಯೋಧನ್ ಮೈಮೇಲೆ ಗುಂಡಿನ ಗಾಯಗಳಿವೆ. ಅಲ್ಲದೇ ಚಾಕುವಿನಿಂದ ಇರಿದ ಗಾಯಗಳು ಪತ್ತೆಯಾಗಿವೆ. ಯೋಧನನ್ನು ಹಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಟೆರಿಟೋರಿಯಲ್ ಆರ್ಮಿ ಜವಾನ್ ಹಿಲಾಲ್ ಅಹ್ಮದ್ ಭಟ್ ಅನಂತನಾಗ್ ನ ಉತ್ರಾಸೂ ಪ್ರದೇಶದ ಸಾಂಗ್ಲಾನ್ ಅರಣ್ಯಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇನ್ನೋರ್ವ ಯೋಧ ಉಗ್ರರಿಂದ ತಪ್ಪಿಸಿಕೊಂಡು ಬಂದಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.