
ಶ್ರೀನಗರ: ಸೇನಾ ವಾಹನದ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿರುವ ಘಟನೆ ಜಮ್ಮು-ಕಾಶ್ಮೀರದ ರಜೌರಿ ಗಡಿ ನಿಯಂತ್ರಣ ರೇಖೆಯ ಫಲ್ ಗ್ರಾಮದ ಬಳಿ ನಡೆದಿದೆ.
ಉಗ್ರರು ಕಾಡಿನಲ್ಲಿ ಅವಿತು ಕುಳಿತಿದ್ದರು. ಸೇನಾ ವಾಹನ ಅದೇ ದಾರಿಯಲ್ಲಿ ಸಾಗುವಾಗ ಗುಂಡಿನ ದಾಳಿ ನಡೆದಿದ್ದಾರೆ. ತಕ್ಷಣ ಸೇನಾ ಸಿಬ್ಬಂದಿ ಪ್ರತಿ ದಾಳಿ ನಡೆಸಿದ್ದು ಉಗ್ರರು ಎಸ್ಕೇಪ್ ಆಗಿದ್ದಾರೆ.
ಸದ್ಯ ಸ್ಥಳದಲ್ಲಿ ಭದ್ರತಾ ಪಡೆ ಸಿಬ್ಬಂದಿಗಳು ಉಗ್ರರಿಗಾಗಿ ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.