
ಶ್ರೀನಗರ: ಚುನಾವಣಾ ಪ್ರಚಾರದ ಭಾಷಣದ ವೇಳೆ ಅಸ್ವಸ್ಥರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಏಕಾಏಕಿ ಕುಸಿದ ಘಟನೆ ಜಮ್ಮು-ಕಾಶ್ಮೀರದಲ್ಲಿ ನಡೆದಿದೆ.
ಜಮ್ಮು-ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇಂದು ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ.
ವೇದಿಕೆ ಮೇಲೆ ಮಾತನಾಡುತ್ತಿದ್ದ ವೇಳೆ ಏಕಾಏಕಿ ಕುಸಿದಿದ್ದು, ತಕ್ಷಣ ಅಕ್ಕಪಕ್ಕದಲ್ಲಿ ಇದ್ದವರು ಖರ್ಗೆ ಅವರ ಕೈಗಳನ್ನು ಹಿಡಿದುಕೊಂಡು ಅವರು ಬೀಳದಂತೆ ತಡೆದಿದ್ದಾರೆ. ಬಳಿಕ ನೀರು ಕುಡಿದು ಸ್ವಲ್ಪ ಸಾವರಿಸಿಕೊಂಡರು. ನಂತರ ವೇದಿಕೆ ಮೇಲೆ ಕುರ್ಚಿಯಲ್ಲಿ ಕುಳಿತು ಖರ್ಗೆ ತಮ್ಮ ಭಾಷಣವನ್ನು ಮಂದುವರೆಸಿದರು.