ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, ಮೂವರು ಸೈನಿಕರು ಸಾವನ್ನಪ್ಪಿದ್ದಾರೆ. 26 ಮಂದಿ ಗಾಯಗೊಂಡಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿದಂತೆ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಗಾಯಾಳುಗಳನ್ನು ಖಾನ್ ಸಾಹಿಬ್ ಮತ್ತು ಬುದ್ಗಾಮ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
2024 ರಲ್ಲಿ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆಗಾಗಿ ಪುಲ್ವಾಮಾದಿಂದ ಬುದ್ಗಾಮ್‌ಗೆ ಸೈನಿಕರನ್ನು ಸಾಗಿಸುತ್ತಿದ್ದ ಬಸ್ ಈ ಘಟನೆ ಸಂಭವಿಸಿದೆ.
ಕಂಪನಿ ಜಿ/124 ರ ಭಾಗವಾಗಿರುವ ಬಿಎಸ್‌ಎಫ್ ಬಸ್ ಚುನಾವಣಾ ಕರ್ತವ್ಯಕ್ಕಾಗಿ ಪಿಎಸ್-ಖಾನ್ ಸಾಹಿಬ್ ವಾಟರ್‌ಹೋಲ್ ಪೊಲೀಸ್ ಪೋಸ್ಟ್‌ಗೆ ತೆರಳುತ್ತಿತ್ತು. ಸರಿಸುಮಾರು ಸಂಜೆ 5 ಗಂಟೆಗೆ, ಬಸ್ ಪೊಲೀಸ್ ಪೋಸ್ಟ್‌ನಿಂದ ಕೇವಲ 600 ಮೀಟರ್ ದೂರದಲ್ಲಿರುವ ಕಮರಿಗೆ ಬಿದ್ದಿದೆ.
CRPF, BSF, ಸ್ಥಳೀಯ ಪೋಲೀಸ್ ಮತ್ತು ನಾಗರಿಕರ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಬಿದ್ದ ರಭಸಕ್ಕೆ ಬಸ್‌ಗೆ ತೀವ್ರ ಹಾನಿಯಾಗಿದ್ದು, ಅದರಲ್ಲಿದ್ದ ಯೋಧರಿಗೆ ಗಂಭೀರ ಗಾಯಗಳಾಗಿವೆ. ತಕ್ಷಣದ ಚಿಕಿತ್ಸೆ ನೀಡಲು ವೈದ್ಯಕೀಯ ತಂಡಗಳನ್ನು ಕಳುಹಿಸಲಾಗಿದೆ.