ಮೈಸೂರು: ಇಂದು ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 1:41 ರಿಂದ 2.10ರ ನಡುವೆ ನಂದಿದ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತದೆ.
ಶುಭ ಮಕರ ಲಗ್ನದಲ್ಲಿ ನಂದಿ ದ್ವಜ ಪೂಜೆ ನೆರವೇರಲಿದೆ. ಸಂಜೆ 4 ರಿಂದ 4:30ರ ನಡುವೆ ಕುಂಬ ಲಗ್ನದಲ್ಲಿ ಜಂಬುಸವಾರಿ ಮೆರವಣಿಗೆಗೆ ಚಾಲನೆ ನೀಡಲಿದ್ದು, ಅರಮನೆಯ ಅಂಗಳದಲ್ಲಿ 40,000 ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಚಾಮುಂಡಿ ಬೆಟ್ಟದಿಂದ ಉತ್ಸವ ಮೂರ್ತಿ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಉತ್ಸವ ಮೂರ್ತಿ ಮೆರವಣಿಗೆ ಆರಂಭವಾಗಲಿದೆ. ಅರಮನೆಯಲ್ಲಿ ಬೆಳಗ್ಗೆ 10:15ಕ್ಕೆ ಉತ್ತರ ಪೂಜೆ ನೆರವೇರಿಸಲಾಗುವುದು. ಬೆಳಗ್ಗೆ 10 ಗಂಟೆಯಿಂದ ಶ್ವೇತವರಹ ದೇವಾಲಯದಲ್ಲಿ ಪೂಜೆ ಬಳಿಕ ಬೆಳಗ್ಗೆ 10:45 ರಿಂದ 11 ಗಂಟೆ ಒಳಗೆ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಜಟ್ಟಿ ಕಾಳಗ ನಡೆಸಲಾಗುವುದು.
ಬೆಳಗ್ಗೆ 11:20 ರಿಂದ ವಿಜಯಯಾತ್ರೆ ಆರಂಭವಾಗಲಿದೆ. ಅರಮನೆ ಅಂಗಳದಿಂದ ಭುವನೇಶ್ವರಿ ದೇವಾಲಯದವರೆಗೆ ವಿಜಯ ಯಾತ್ರೆ ನಡೆಯಲಿದ್ದು, ಬನ್ನಿ ಪೂಜೆಯ ನಂತರ ಸ್ವಸ್ಥಾನಕ್ಕೆ ಆಗಮಿಸಲಿದೆ. ನಂತರ ಯದುವೀರ್ ಒಡೆಯರ್ ಕಂಕಣ ವಿಸರ್ಜಿಸಲಿದ್ದಾರೆ ಎನ್ನಲಾಗಿದೆ.