ನವದೆಹಲಿ: ದೆಹಲಿಯ ಜಾಮಾ ಮಸೀದಿ ವಿವಾದಾತ್ಮಕ ನಾಮಫಲಕ ತೆರವುಗೊಳಿಸಿದೆ. ಜಾಮಾ ಮಸೀದಿಯ ಆಡಳಿತ ಮಂಡಳಿಯಿಂದ ನಾಮಫಲಕ ತೆರವು ಮಾಡಲಾಗಿದೆ.
ಇಂದು ಬೆಳಿಗ್ಗೆ ಮಸೀದಿ ಆಡಳಿತ ಮಂಡಳಿಯಿಂದ ವಿವಾದಿತ ನಾಮಫಲಕ ಅಳವಡಿಸಲಾಗಿತ್ತು. ಜಾಮಾ ಮಸೀದಿಗೆ ಒಂಟಿ ಮಹಿಳೆಯರ ಪ್ರವೇಶ ನಿರ್ಬಂಧಿಸಲಾಗಿದೆ. ಕುಟುಂಬದ ಪುರುಷ ಸದಸ್ಯರ ಜೊತೆಗೆ ಬರಬೇಕೆಂದು ನಾಮಫಲಕ ಅಳವಡಿಸಲಾಗಿತ್ತು. ಈ ಸಂಬಂಧ ಮಸೀದಿ ಆಡಳಿತ ಮಂಡಳಿಗೆ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ನೋಟಿಸ್ ಜಾರಿ ಮಾಡಿದ್ದರು. ಇದರ ಬೆನ್ನಲ್ಲೇ ನಾಮಫಲಕ ತೆರವು ಮಾಡಲಾಗಿದೆ ಎಂದು ಹೇಳಲಾಗಿದೆ.