ಬೆಂಗಳೂರು : ಕಾವೇರಿ 5ನೇ ಹಂತದ ಯೋಜನೆ ಅಂತಿಮಘಟ್ಟ ತಲುಪಿದ್ದು, 110 ಹಳ್ಳಿಗಳಿಗೆ ನೀರು ಪೂರೈಸಲು ʼಹೈಡ್ರೊಟೆಸ್ಟ್ʼ ಅನ್ನು ಜಲಮಂಡಳಿ ಆರಂಭಿಸಿದೆ.
ಈ ಪರೀಕ್ಷೆ ಮುಗಿದ ಮೇಲೆ ಯೋಜನೆಗೆ ಹಣಕಾಸು ಒದಗಿಸುತ್ತಿರುವ ಜಪಾನ್ ಅಂತಾರಾಷ್ಟ್ರೀಯ ಸಹಕಾರ ಏಜೆನ್ಸಿ ಪರಿಶೀಲನೆ ನಡೆಸಲಿದೆ. ಜೂನ್ ಮಧ್ಯಭಾಗದಲ್ಲಿ ನೀರು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಕಾವೇರಿ 5ನೇ ಹಂತದ ಯೋಜನೆಯಲ್ಲಿ 775 ಎಂಎಲ್ ನೀರನ್ನು 2,800 ಕಿ.ಮೀ ಕೊಳವೆ ಮಾರ್ಗದಲ್ಲಿ ಜಲಮಂಡಳಿ ಪೂರೈಸಲಿದೆ ಎಂದು ಮನೋಹರ್ ತಿಳಿಸಿದ್ದಾರೆ.