ಚಿಕ್ಕಮಗಳೂರು: ಕುಡಿಯುವ ನೀರು ಯೋಜನೆ ಜಲಜೀವನ್ ಯೋಜನೆಗೆಂದು ಪೈಪ್ ಗಳನ್ನು ತಂದು ಹಾಕಿದ್ದರೆ ಕಿಡಿಗೇಡಿಗಳು ಪೈಪ್ ಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತ್ರಿಪುರ ಗ್ರಾಮದಲ್ಲಿ ನಡೆದಿದೆ.
25 ಲಕ್ಷ ರೂಪಾಯಿ ಮೌಲ್ಯಗಳ ನೀರಿನ ಪೈಪ್ ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಹರ್ ಘರ್ ಜಲ್ ಯೋಜನೆಯಡಿ ಮನೆ ಮನೆಗೂ ನೀರಿನ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಪೈಪ್ ಗಳನ್ನು ತಂದು ಹಾಕಲಾಗಿತ್ತು.
ಪೈಪ್ ಜೋಡಣೆ ಕಾಮಗಾರಿ ಇಂದಿನಿಂದ ಆರಂಭವಾಗಬೇಕಿತ್ತು. ಆದರೆ ರಾತ್ರಿ ಬೆಳಗಾಗುವಷ್ಟರಲ್ಲಿ ಕಿಡಿಗೇಡಿಗಳು ಪೈಪ್ ಗಳನ್ನು ಸುಟ್ಟು ಹಾಕಿದ್ದಾರೆ. ಹರೀಶ್ ಎಂಬುವವರು ಯೋಜನೆ ಗುತ್ತಿಗೆ ಪಡೆದು ಪೈಪ್ ತಂದು ಹಾಕಿದ್ದರು. ಇದೀಗ 25 ಲಕ್ಷ ಮೌಲ್ಯದ ಪೈಪ್ ಬೆಂಕಿಗಾಹುತಿಯಾಗಿದೆ. ಗುತ್ತಿಗೆದಾರ ಕಣ್ಣೀರಿಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಬಣಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.