ಜಲ ಜೀವನ್ ಮಿಷನ್ ನ ಮಹತ್ವದ ಹೆಗ್ಗುರುತಾಗಿ, ದೇಶದ 100 ಜಿಲ್ಲೆಗಳ ಪ್ರತಿ ಮನೆಗೆ ನಲ್ಲಿ ನೀರಿನ ಸಂಪರ್ಕ ಒದಗಿಸಿದ ಮೈಲಿಗಲ್ಲು ಸಾಧಿಸಿದೆ.
“ಒಣ ಭೂಮಿಯಿಂದ ದೇಶದ ಮೂಲೆ ಮೂಲೆಗಳಲ್ಲೂ, ನಮ್ಮ ಸರ್ಕಾರವು ನೀಡಿದ ಭರವಸೆಯು ಈಗ ದೇಶದ 100 ಜಿಲ್ಲೆಗಳಲ್ಲಿ ವಾಸ್ತವ ರೂಪ ತಾಳಿದೆ,” ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಚಂಬಾ 100ನೇ ‘ಹರ್ ಘರ್ ಜಲ್’ ಜಿಲ್ಲೆಯಾಗಿ ಮಾರ್ಪಟ್ಟಿದೆ. ಈ ವಾರದ ಆರಂಭದಲ್ಲಿ, ಈ ಉಪಕ್ರಮವು ಒಂಬತ್ತು ಕೋಟಿ ಗ್ರಾಮೀಣ ಕುಟುಂಬಗಳಿಗೆ ಶುದ್ಧ ನಲ್ಲಿ ನೀರನ್ನು ಒದಗಿಸುವ ಮೈಲಿಗಲ್ಲು ದಾಟಿತ್ತು.
ʼವಿಟಮಿನ್ ಡಿʼ ಕೊರತೆಯಿಂದ ಕೋವಿಡ್ ತೀವ್ರತೆ ಇನ್ನೂ ಜೋರು: ಅಧ್ಯಯನದಲ್ಲಿ ಬಹಿರಂಗ
ಆಗಸ್ಟ್ 15, 2019 ರಂದು ’ಪ್ರತಿ ಮನೆಗೂ ನಲ್ಲಿ ನೀರು’ ಯೋಜನೆಯನ್ನು ಘೋಷಿಸಿದಾಗಿನಿಂದ, ಗ್ರಾಮೀಣ ಪ್ರದೇಶದ 5.78 ಕೋಟಿಗೂ ಹೆಚ್ಚು ಕುಟುಂಬಗಳಿಗೆ ನಲ್ಲಿ ನೀರು ಸರಬರಾಜು ಮಾಡಲಾಗಿದೆ.
ಅಭಿಯಾನ ಘೋಷಣೆಯ ಸಮಯದಲ್ಲಿ, ದೇಶದ 19.27 ಕೋಟಿ ಕುಟುಂಬಗಳಲ್ಲಿ 3.23 ಕೋಟಿ (17%) ಮಾತ್ರ ನಲ್ಲಿ ನೀರಿನ ಸಂಪರ್ಕ ಹೊಂದಿದ್ದವು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಅಲ್ಪಾವಧಿಯಲ್ಲಿ 100 ಜಿಲ್ಲೆಗಳು, 1,138 ಬ್ಲಾಕ್‌ಗಳು, 66,328 ಗ್ರಾಮ ಪಂಚಾಯಿತಿಗಳು ಮತ್ತು 1,36,803 ಗ್ರಾಮಗಳು ‘ಹರ್ ಘರ್ ಜಲ್’ ಆಗಿವೆ ಎಂದು ಪ್ರಕಟಣೆ ಹೇಳಿದೆ.
ಗೋವಾ, ಹರಿಯಾಣ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪುದುಚೇರಿ, ದಾದರ್ ಮತ್ತು ನಾಗರ್ ಹವೇಲಿ ಮತ್ತು ದಮನ್ ಮತ್ತು ದಿಯುಗಳಲ್ಲಿ ಪ್ರತಿ ಊರಿನ ಮನೆಗಳಿಗೆ ನಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.
ಪಂಜಾಬ್ (99% ಕವರೇಜ್), ಹಿಮಾಚಲ ಪ್ರದೇಶ (92.5%), ಗುಜರಾತ್ (92%) ಮತ್ತು ಬಿಹಾರಗಳಂಥ (90%) ಇನ್ನೂ ಅನೇಕ ರಾಜ್ಯಗಳು 2022 ರಲ್ಲಿ ‘ಹರ್ ಘರ್ ಜಲ್’ ಆಗುವ ಅಂಚಿನಲ್ಲಿವೆ.