
ರಾಜಸ್ಥಾನದ ಜೈಪುರದಲ್ಲಿ ಖ್ಯಾತ ವೈದ್ಯೆಯೊಬ್ಬರ ಮನೆಗೆ ಕಳ್ಳರು ಕನ್ನ ಹಾಕಿದ್ದಾರೆ. ಮೂರು ಅಂತಸ್ತಿನ ಐಷಾರಾಮಿ ಬಂಗಲೆಯಲ್ಲಿ ಭರ್ಜರಿ ಬೇಟೆಗೆ ಇಳಿದ ಕಳ್ಳರು ಮನೆಯ ಎಲ್ಲ ಮೂಲೆಗಳನ್ನು ಜಾಲಾಡಿ 9 ಲಕ್ಷ ರೂ. ನಗದು, ಚಿನ್ನಾಭರಣಗಳು, ವಜ್ರದ ಬಳೆಗಳು, ನೆಕ್ಲೆಸ್, ದುಬಾರಿ ವಾಚ್ ದೋಚಿಕೊಂಡು ಹೋಗಿದ್ದಾರೆ.
ಆದರೆ, ಸಿಸಿಟವಿಯಲ್ಲಿ ಕಂಡುಬಂದಿರುವಂತೆ ಕಳ್ಳರು ಮನೆಯಲ್ಲಿಓಡಾಡಿರುವ ರೀತಿ ಬಹಳ ಪರಿಚಿತರಂತೆ ಇದೆ. ಅಂದರೆ, ಎಲ್ಲಅಂತಸ್ತಿನಲ್ಲಿಯೂ ಏನೇನು ಸಾಮಾನುಗಳಿವೆ ಎಂದು ಕಳ್ಳರಿಗೆ ಮೊದಲೇ ತಿಳಿದ ಮಾದರಿಯಲ್ಲಿಇರುವುದು ವಿಶೇಷ.
ಡಾ. ಶಾಲಿನಿ ಅವರು ತಮ್ಮ ಮನೆಯಲ್ಲಿನ ಕಳ್ಳತನದ ಕುರಿತು ಪೊಲೀಸರಿಗೆ ದೂರು ನೀಡಿದಾಗ , ಸಿಸಿಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ಶೋಧಿಸಿದ್ದಾರೆ. ಅದರಲ್ಲಿ ಕಳ್ಳರ ಕರಾಮತ್ತು ಇಂಚಿಂಚು ಕೂಡ ಬಯಲಾಗಿದೆ. ಕಳ್ಳರಿಗೆ ಮನೆಯಲ್ಲಿಸಿಸಿ ಟಿವಿ ಇರುವುದು ತಿಳಿದೇ ಅವರು ಕೃತ್ಯ ಎಸಗಿರುವುದು ಕೂಡ ದೃಶ್ಯಾವಳಿಯಲ್ಲಿ ಖಾತರಿಯಾಗಿದೆ.
ವರ್ಷಾರಂಭದಲ್ಲೇ ವಿಶ್ವದ ಕುಬೇರನ ಸಂಪತ್ತು ಏರಿಕೆ, ವಿಶ್ವದ ಶ್ರೀಮಂತ ಎಲಾನ್ ಮಸ್ಕ್ 30.5 ಶತಕೋಟಿ ಡಾಲರ್ ಒಡೆಯ
ಮನೆಯಲ್ಲಿನ ಕೆಲಸಗಾರರು, ಭದ್ರತಾ ಸಿಬ್ಬಂದಿಯನ್ನು ಕಳ್ಳತನ ಪ್ರಕರಣ ಸಂಬಂಧ ತೀವ್ರ ಪೊಲೀಸರು ತೀವ್ರ ತನಿಖೆಗೆ ಒಳಪಡಿಸಿದ್ದಾರೆ. ಯಾಕೆಂದರೆ, ಇವರ ಮಾಹಿತಿ ಆಧರಿಸಿಯೇ ಕಳ್ಳರು ಸುಲಭವಾಗಿ ಮನೆಗೆ ನುಗ್ಗಿರುವ ಸಾಧ್ಯತೆಗಳಿವೆ. ಮನೆಯೊಳಗಿನ ಕೆಲಸಗಾರರು ಕಳ್ಳರಿಗೆ ಪರಿಚಿತರಾಗಿರಬಹುದು. ಮಾತಿನ ಭರದಲ್ಲಿ ಮನೆಯ ಪೂರ್ಣ ಚಿತ್ರಣ ನೀಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.