ಜೈಪುರದ ಸವಾಯಿ ಮಾನ್ಸಿಂಗ್ ವೈದ್ಯಕೀಯ ಕಾಲೇಜಿನ ಕನಿಷ್ಠ 15 ವೈದ್ಯರನ್ನು ದುಡ್ಡಿಗಾಗಿ ಗ್ಯಾಂಗ್ ಒಂದು ಬ್ಲಾಕ್ ಮೇಲ್ ಮಾಡಿಕೊಂಡು ಬಂದಿದೆ. ಈ ಸಂಬಂಧ ಜೈಪುರದ ನಿವಾಸಿ ವೈದ್ಯರ ಸಂಘಟನೆ ಎಫ್‌ಐಆರ್ ಒಂದನ್ನು ದಾಖಲಿಸಿದೆ. ಸರ್ಜನ್ ಒಬ್ಬರು ಈ ವಿಚಾರವನ್ನು ಸಂಘಟನೆಯ ಗಮನಕ್ಕೆ ತಂದ ಬಳಿಕ ಘಟನೆ ಬೆಳಕಿಗೆ ಬಂದಿದೆ.
“ಯಾರೋ ಒಬ್ಬರು ತಮ್ಮ ಸಂಖ್ಯೆಗೆ ವಿಡಿಯೋ ಕಾಲ್ ಮಾಡಿದಾಗ, ಹುಡುಗಿಯೊಬ್ಬಳ ಅಸಭ್ಯ ವಿಡಿಯೋವೊಂದು ಸ್ಕ್ರೀನ್ ಮೇಲೆ ಬಂದಿದ್ದಾಗಿ ಆತ ನಮಗೆ ತಿಳಿಸಿದ್ದಾರೆ. ಅದನ್ನು ನೋಡಿ ಶಾಕ್ ಆದ ಅವರಿಗೆ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ, ಕರೆದಾರರು ಕರೆಯ ಸ್ಕ್ರೀನ್‌ಶಾಟ್ ತೆಗೆದುಕೊಂಡಿದ್ದಾರೆ. ವೈದ್ಯರು ಸೆಕೆಂಡ್‌ಗಳಲ್ಲಿ ಕರೆಯನ್ನು ಡಿಸ್ಕನೆಕ್ಟ್ ಮಾಡಿದ್ದಾರೆ” ಎಂದು ಸಂಘಟನೆ ಅಧ್ಯಕ್ಷ ಡಾ. ಅಮಿತ್ ಯಾದವ್ ತಿಳಿಸಿದ್ದಾರೆ.
ಕರೆ ಡಿಸ್ಕನೆಕ್ಟ್ ಆದ ಬಳಿಕ ವೈದ್ಯರಿಗೆ ಬೆದರಿಕೆ ಕರೆಗಳು ಬರತೊಡಗಿವೆ. ಕರೆದಾರರು ತಮಗೆ 10,000 ರೂ.ಗಳನ್ನು ಖಾತೆಗೆ ಹಾಕದೇ ಇದ್ದಲ್ಲಿ ವಿಡಿಯೋದ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬ್ಲಾಕ್‌ಮೇಲ್ ಮಾಡಿದ್ದಾರೆ.
ಇದೇ ರೀತಿಯಲ್ಲಿ ಅನೇಕ ವೈದ್ಯರು ಸಹ ಹೀಗೇ ಕರೆ ಸ್ವೀಕರಿಸಿದ್ದಾರೆ. ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಲೇ, ಸಂಘಟನೆಯು ಎಸ್‌ಎಂಎಸ್ ಕಾಲೇಜಿನ ವೈದ್ಯರಿಗೆ ರೆಡ್ ಅಲರ್ಟ್ ಸಂದೇಶವೊಂದನ್ನು ರವಾನೆ ಮಾಡಿ, ಈ ಬಗ್ಗೆ ಯಾರೂ ಹೆದರದೇ ಇರಲು ಕೋರಿದೆ.