ಮೊದಲನೇ ಸ್ಥಾನಕ್ಕೇರಿದ ಜೈಪುರ್ ಪಿಂಕ್ ಪ್ಯಾಂಥರ್ಸ್ 01-12-2022 11:50AM IST / No Comments / Posted In: Featured News, Live News, Sports ನಿನ್ನೆ ನಡೆದ ಬೆಂಗಳೂರು ಬುಲ್ಸ್ ಹಾಗೂ ಜೈಪುರ್ ಪಿಂಕ್ ಪ್ಯಾಂಥರ್ಸ್ ನಡುವಣ ಕಬ್ಬಡಿ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಭರ್ಜರಿ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನಕ್ಕೇರಿದೆ. ರೆಝಾ ಮಿರ್ಬಾಘೇರಿ 6 ಟ್ಯಾಕಲ್ ಪಾಯಿಂಟ್ ಪಡೆದರೆ ಅರ್ಜುನ್ ದೇಶ್ವಾಲ್ 13 ರೈಡ್ ಪಾಯಿಂಟ್ ಗಳಿಸುವ ಮೂಲಕ ಜೈಪುರ್ ಪಿಂಕ್ ಪ್ಯಾಂಥರ್ಸ್ ಗೆಲುವಿಗೆ ಪ್ರಮುಖ ಪ್ರಮುಖ ಪಾತ್ರ ವಹಿಸಿದ್ದಾರೆ. ಜೈಪುರ್ ಪಿಂಕ್ ಪ್ಯಾಂಥರ್ಸ್ 45-25 ರಿಂದ ಭರ್ಜರಿ ಗೆಲುವು ಸಾಧಿಸಿದ್ದು, ಈ ಮೂಲಕ ಜೈಪುರ್ ಪಿಂಕ್ ಪ್ಯಾಂಥರ್ಸ್ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನ ಕಾಯ್ದುಕೊಂಡಿದೆ. ಎರಡನೇ ಸ್ಥಾನದಲ್ಲಿ ಪುಣೇರಿ ಪಲ್ಟಾನ್ ಹಾಗೂ ಮೂರನೇ ಸ್ಥಾನದಲ್ಲಿ ಬೆಂಗಳೂರು ಬುಲ್ಸ್ ತಂಡವಿದೆ. ಕ್ವಾಲಿಫೈಯರ್ ಪ್ರವೇಶಿಸಲು ಎಲ್ಲಾ ತಂಡಗಳು ಹೋರಾಟ ನಡೆಸುತ್ತಿವೆ. ಇಂದಿನ ಕಬ್ಬಡಿ ಪಂದ್ಯದಲ್ಲಿ ಯುಪಿ ಯೋಧಸ್ ಹಾಗೂ ಯು ಮುಂಬಾ ಮುಖಾಮುಖಿಯಾಗಲಿದ್ದು, ಮತ್ತೊಂದು ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಹಾಗೂ ಗುಜರಾತ್ ಜೆಂಟ್ಸ್ ಸೆಣಸಾಡಲಿವೆ. Day 47 headlines: ▪️ #TopCats jump to 1️⃣st position▪️ @DabangDelhiKC 🤝🏽 @tamilthalaivas #vivoProKabaddi #FantasticPanga #BLRvJPP #DELvCHE pic.twitter.com/jBjhCLgDu3 — ProKabaddi (@ProKabaddi) November 30, 2022