ಜೈಪುರದ ಮುಹಾನ ಪ್ರದೇಶದಲ್ಲಿ ತರಕಾರಿ ಮಾರಾಟಗಾರನನ್ನು ಆತನ ಹೆಂಡತಿ ಮತ್ತು ಆಕೆಯ ಪ್ರಿಯಕರ ಸೇರಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಆರೋಪಿಗಳಾದ ಗೋಪಾಲಿ ದೇವಿ ಮತ್ತು ದೀನದಯಾಳ್ ಅವರನ್ನು ಮಾರ್ಚ್ 18ರಂದು ಬಂಧಿಸಲಾಗಿದೆ. ಧನ್ನಲಾಲ್ ಸೈನಿ ಅವರ ಮೃತದೇಹ ಮಾರ್ಚ್ 16ರಂದು ಮುಹಾನದಲ್ಲಿ ಪತ್ತೆಯಾಗಿತ್ತು.
42 ವರ್ಷದ ಪತ್ನಿ ದೇವಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತನ್ನ ಪ್ರಿಯಕರ ದೀನದಯಾಳ್ ಸಹಾಯದಿಂದ ಸೈನಿಯನ್ನು ಕೊಂದಿರುವುದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. “ತನ್ನ ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ಸೈನಿಗೆ ತಿಳಿದಾಗ, ಮಾರ್ಚ್ 15ರಂದು ಗೋಪಾಲಿ ಕೆಲಸ ಮಾಡುತ್ತಿದ್ದ ದೀನದಯಾಳ್ ಅಂಗಡಿಗೆ ಹೋಗಿದ್ದನು. ಅಲ್ಲಿ ವಾಗ್ವಾದದ ನಂತರ, ಗೋಪಾಲಿ ಮತ್ತು ದೀನದಯಾಳ್ ಧನ್ನಲಾಲ್‌ನನ್ನು ಹೊಡೆದು ಸ್ಥಳದಲ್ಲೇ ಸಾಯಿಸಿದ್ದಾರೆ” ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.
ನಂತರ, ಅವರು ಮೃತದೇಹವನ್ನು ಚೀಲದಲ್ಲಿ ತುಂಬಿಸಿ ಸುಟ್ಟಿದ್ದಾರೆ. ಮರುದಿನ ಬೆಳಿಗ್ಗೆ ಮೃತದೇಹ ಪತ್ತೆಯಾಗಿದೆ. ಆರೋಪಿಗಳು ಧನ್ನಲಾಲ್ ಮೃತದೇಹವನ್ನು ಸಾಗಿಸುತ್ತಿರುವ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. 15 ಸೆಕೆಂಡ್‌ಗಳ ವಿಡಿಯೋದಲ್ಲಿ ಮಹಿಳೆ ಮತ್ತು ಆಕೆಯ ಪ್ರಿಯಕರ ಮೃತದೇಹವನ್ನು ಚೀಲದಲ್ಲಿ ತುಂಬಿಸಿ ಮೋಟಾರ್‌ಸೈಕಲ್‌ನಲ್ಲಿ ಸಾಗಿಸುತ್ತಿರುವುದು ಕಂಡುಬಂದಿದೆ.
⚠️Trigger Warning : Sensitive Visual⚠️
जयपुर में गोपाली देवी ने बॉयफ्रेंड दीनदयाल संग मिलकर अपने पति धन्नालाल सैनी की गला दबाकर हत्या कर दी। फिर लाश बोरे में पैक की और जंगल में ले जाकर जला दी।
(वीडियो में 7वें सेकेंड पर लाश का बोरा बाइक पर लेकर जा रहे हैं) pic.twitter.com/vuMqvGlWmG
— Sachin Gupta (@SachinGuptaUP) March 20, 2025