ಸ್ಟ್ರೀಟ್ ಫುಡ್ ಅಂದ್ರೆ ಸಾಕು ಬಹುತೇಕರು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಬಿಸಿ ಬಿಸಿಯಾದ ಸಮೋಸಾಗಳಿಂದ ಹಿಡಿದು ಮಸಾಲೆಯುಕ್ತ ಪಾನಿಪುರಿಗಳವರೆಗೆ ಸ್ಟ್ರೀಟ್ ಫುಡ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ? ಕೇಳಿದ್ರೇನೆ ಬಾಯಲ್ಲಿ ನೀರೂರುತ್ತದೆ. ಈ ಬೀದಿ ಬದಿ ಆಹಾರದ ಬಗ್ಗೆ ನಾವ್ಯಾಕೆ ಹೀಗೆ ಪೀಠಿಕೆ ಹಾಕುತ್ತಿದ್ದೇವೆ ಅಂತಾ ಅಚ್ಚರಿ ಪಡುತ್ತಿದ್ದರೆ ಮುಂದೆ ಓದಿ….
ರಾಜಸ್ಥಾನದ ಜೈಪುರದ ದಂಪತಿ ರಸ್ತೆ ಬದಿ ಆಹಾರ ಮಳಿಗೆ ನಡೆಸುತ್ತಿದ್ದಾರೆ. ಅವರು ಪೂರಿ ಸಬ್ಜಿ ಮಾರಾಟ ಮಾಡುತ್ತಾರೆ. ಒಂದು ಬೌಲ್ ಸಬ್ಜಿ ಮತ್ತು 10 ಪೂರಿ ಬೆಲೆ ಕೇವಲ 30 ರೂಪಾಯಿ. ಜೊತೆ ರಾಯಿತಾ ಕೂಡ ಇದೆ. ಇದು ರೂ. 10ಕ್ಕೆ ಲಭ್ಯವಿದೆ. ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ, ವ್ಯಕ್ತಿಯು ಪೂರಿಗಳನ್ನು ತಯಾರಿಸಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವುದನ್ನು ಕಾಣಬಹುದು. ಅವರು ಬೆಳಿಗ್ಗೆ 7:30ಕ್ಕೆ ತಮ್ಮ ಕಾರ್ಯ ಶುರು ಮಾಡುತ್ತಾರೆ. ಮಧ್ಯಾಹ್ನ 2ರ ವರೆಗೂ ಅಂಗಡಿ ತೆರೆದಿರುತ್ತದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಲವಾರು ನೆಟ್ಟಿಗರ ಗಮನ ಸೆಳೆದಿದೆ. ಬಹಳ ಅಗ್ಗದ, ರುಚಿಕರವಾದ ಭಕ್ಷ್ಯವಾಗಿದೆ ಅಂತಾ ಅನೇಕರು ಪ್ರತಿಕ್ರಿಯಿಸಿದ್ದಾರೆ. ನನ್ನ ಮುಂದಿನ ಜೈಪುರ ಪ್ರವಾಸದಲ್ಲಿ ಖಂಡಿತವಾಗಿಯೂ ಈ ಸ್ಥಳಕ್ಕೆ ಭೇಟಿ ನೀಡುತ್ತೇನೆ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಈ ದಂಪತಿ ಅತ್ಯಂತ ಕಡಿಮೆ ಬೆಲೆಗೆ ಆಹಾರ ನೀಡುತ್ತಿರುವುದನ್ನು ಶ್ಲಾಘಿಸಿದ್ದಾರೆ.