ನೆಟ್‌ಫ್ಲಿಕ್ಸ್‌ನ ಜನಪ್ರಿಯ ಶೋ ’ಮನಿ ಹೀಸ್ಟ್’ನ 5ನೇ ಸೀಸನ್ ವೀಕ್ಷಿಸಲು ಜೈಪುರ ಮೂಲದ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಒಂದಿಡೀ ದಿನ ರಜೆ ಕೊಟ್ಟಿದೆ.
’ವರ್ವೆ ಲಾಜಿಕ್’ ಹೆಸರಿನ ಈ ಕಂಪನಿ ತನ್ನ ಉದ್ಯೋಗಿಗಳಿಗೆ ಸೆಪ್ಟೆಂಬರ್ 3ರಂದು ರಜೆ ನೀಡಿದ್ದು, ’ನೆಟ್‌ಫ್ಲಿಕ್ಸ್ ಅಂಡ್ ಚಿಲ್ ಹಾಲಿಡೇ’ ಎಂದು ಈ ರಜೆಗೆ ಹೆಸರಿಟ್ಟಿದೆ.
ಕಂಪನಿಗಾಗಿ ಅಷ್ಟೆಲ್ಲಾ ದುಡಿಯುವ ಉದ್ಯೋಗಿಗಳಿಗೆ ಆಗಾಗ ಹೀಗೊಂದು ಬ್ರೇಕ್ ಪಡೆಯುವುದು ಬಹಳ ಮುಖ್ಯವೆಂದು ಸಿಇಓ ಅಭಿಷೇಕ್ ಜೈನ್ ಹೇಳಿದ್ದಾರೆ.
ಹಣಕ್ಕಾಗಿ ಎಟಿಎಂ ಸ್ಫೋಟಿಸಿದ್ರು, ಒಂದು ಪೈಸೆಯೂ ಸಿಗದೇ ಕಾಲ್ಕಿತ್ತರು…!
“ಮಾಸ್ ಬಂಕ್ ಗಳು, ನಂಬರ್ ಸ್ವಿಚ್ ಆಫ್ ಮಾಡಿಕೊಳ್ಳುವುದು ಹಾಗೂ ಹುಸಿ ರಜೆಗಳಿಂದ ನಮ್ಮ ಇ-ಮೇಲ್‌ಗಳ ಮೇಲೆ ದಾಳಿಯಾಗುವುದನ್ನು ತಪ್ಪಿಸಲು ಹೀಗೆ ಮಾಡಿದ್ದೇವೆ. ಏಕೆಂದರೆ ಕೆಲವೊಮ್ಮೆ ಕೆಲಸ ಮಾಡಲು ’ಚಿಲ್ಲಿಂಗ್ ಕ್ಷಣಗಳನ್ನು’ ಕಳೆಯುವುದೇ ಉತ್ತಮವೆಂದು ನಮಗೆ ಗೊತ್ತಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಯಾನದ ಕುರಿತು ಮಾತನಾಡಿದ ಜೈನ್, “ಪಾಪ್‌ಕಾರ್ನ್ ಹಿಡಿದುಕೊಂಡು, ಇಡೀ ಚಿತ್ರತಂಡಕ್ಕೊಂದು ಕೊನೆಯ ಬೈ ಹೇಳಲು ಸಜ್ಜಾಗಿ. ಇದರಿಂದ ವರ್ವೆ ಲಾಜಿಕ್ ಮನೆಯಿಂದ ಕೆಲಸ ಮಾಡುವ ವೇಳೆ ಅದ್ಭುತ ಸ್ಪೂರ್ತಿ ತೋರಿ, ಕಠಿಣ ಪರಿಸ್ಥಿತಿಯಿಂದ ಹೊರಗೆ ಬರಲು ನೆರವಾದ ತನ್ನೆಲ್ಲಾ ಸಿಬ್ಬಂದಿಗೆ ಧನ್ಯವಾದ ತಿಳಿಸಲು ಇಚ್ಛಿಸುತ್ತದೆ.
’ಒಂದು ಬ್ರೇಕ್ ಅಂತೂ ತೆಗೆದುಕೊಳ್ಳಬಹುದು’ ಎಂದು ನಮ್ಮೆಲ್ಲರಿಗೂ ಚೆನ್ನಾಗಿ ಗೊತ್ತಿದೆ” ಎಂದು ಕಚೇರಿಯ ಸಿಬ್ಬಂದಿಗೆ ಮೇಲ್ ಮಾಡಿದ್ದಾರೆ.