alex Certify ಜೈನಮುನಿ ಹತ್ಯೆ ಪ್ರಕರಣ : ಹಂತಕರಿಗೆ ಫೋನ್ ಕರೆ ಮಾಡಿದವರಿಗೆ ಪೊಲೀಸರಿಂದ ನೋಟಿಸ್! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೈನಮುನಿ ಹತ್ಯೆ ಪ್ರಕರಣ : ಹಂತಕರಿಗೆ ಫೋನ್ ಕರೆ ಮಾಡಿದವರಿಗೆ ಪೊಲೀಸರಿಂದ ನೋಟಿಸ್!

ಬೆಳಗಾವಿ  : ಚಿಕ್ಕೋಡಿ ತಾಲೂಕಿನ ಹೀರೆಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸರು ತನಿಖೆ ನಡೆಸುತ್ತಿದ್ದು,ಇದೀಗ ಹಂತಕರಿಗೆ ಕರೆ ಮಾಡಿದವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಜೈನಮುನಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ನಾರಾಯಣ ಮಾಳಿ ಮತ್ತು ಎ2 ಆರೋಪಿ ಹಸನ್ ದಲಾಯತ್‌ನನ್ನು ಜುಲೈ 17ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಹಿನ್ನೆಲೆ ಡಿವೈಎಸ್ಪಿ ಬಸವರಾಜ್ ಯಲಿಗಾರ ಅವರ ನೇತೃತ್ವದಲ್ಲಿ ಆರೋಪಿಗಳ ತೀವ್ರ ವಿಚಾರಣೆಯನ್ನು ನಡೆಸುತ್ತಿದ್ದು, ಈಗಾಗಲೇ ಚಿಕ್ಕೋಡಿ ಪೊಲೀಸರು ಹಲವು ಟೆಕ್ನಿಕಲ್ ಎವಿಡೆನ್ಸ್‌ಗಳನ್ನು ಸಂಗ್ರಹಿಸಿದ್ದಾರೆ.

ಜೈನಮುನಿಗಳು ಬಳಸುತ್ತಿದ್ದ ಎರಡು ಮೊಬೈಲ್ ಹಾಗೂ ಇಬ್ಬರು ಆರೋಪಿಗಳ ತಲಾ ಒಂದೊಂದು ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ಹಂತಕರು ಹತ್ಯೆ ಘಟನೆಗೂ ಮುನ್ನ ಹಾಗೂ ಬಳಿಕ ಕರೆ ಮಾಡಿದವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಹಂತಕರು ಜೈನ ಮುನಿಗಳಿಗೆ ಒಂದು ವಾರದ ಮುನ್ನ ಕರೆ ಮಾಡಿದ್ದರು. ಆರೋಪಿಗಳು ಹತ್ಯೆಗೂ ಮುನ್ನ ಹಾಗೂ ನಂತರ ಯಾರಿಗೆಲ್ಲಾ ಕರೆ ಮಾಡಿದ್ದರು ಅವರಿಗೆಲ್ಲಾ ನೋಟಿಸ್ ನೀಡಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...