ಕೇರಳ: ಜೈಲರ್ ಚಿತ್ರದಲ್ಲಿ ನಟಿಸಿದ ವಿನಾಯಗನ್ ಅವರ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರು ತಮ್ಮ ನೆರೆಹೊರೆಯವರ ಜೊತೆ ಅಶ್ಲೀಲವಾಗಿ ವರ್ತಿಸುತ್ತಿರುವುದು ವೀಡಿಯೋದಲ್ಲಿ ಕಂಡುಬಂದಿದೆ. ಈ ಘಟನೆಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ವೀಡಿಯೋದಲ್ಲಿ ವಿನಾಯಗನ್ ತಮ್ಮ ಬಾಲ್ಕನಿಯಿಂದ ತಮ್ಮ ನೆರೆಹೊರೆಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ಕಂಡುಬಂದಿದೆ. ನಂತರ ಅವರು ಬಾಲ್ಕನಿಯಲ್ಲಿ ಮಲಗಿಕೊಂಡು ಅಶ್ಲೀಲ ಚಲನೆ ಮಾಡಿದ್ದಾರೆ.
ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ವಿನಾಯಗನ್ ಫೇಸ್ಬುಕ್ನಲ್ಲಿ ಕ್ಷಮೆಯಾಚಿಸಿದ್ದಾರೆ. ಅವರು ಬರೆದಿರುವಂತೆ, “ಒಬ್ಬ ನಟನಾಗಿ ಮತ್ತು ಅನೇಕ ವಿಷಯಗಳನ್ನು ನಿಭಾಯಿಸುವ ವ್ಯಕ್ತಿಯಾಗಿ ನಾನು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ. ನನ್ನ ಈ ನಡವಳಿಕೆಗಾಗಿ ಎಲ್ಲಾ ಪ್ರೇಕ್ಷಕರಿಗೆ ಕ್ಷಮೆಯಾಚಿಸುತ್ತೇನೆ.” ಎಂದಿದ್ದಾರೆ.
ಇದು ವಿನಾಯಗನ್ ಮೊದಲ ಬಾರಿಗೆ ವಿವಾದಕ್ಕೆ ಸಿಲುಕಿರುವುದು ಅಲ್ಲ. ಇದಕ್ಕೂ ಮೊದಲು ಅವರು ಮದ್ಯಪಾನ ಮಾಡಿ ಗೇಟ್ ಕೀಪರ್ನೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದರು. ನಂತರ ಎರ್ನಾಕುಲಂನಲ್ಲಿರುವ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದರು.
ವಿನಾಯಗನ್ ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಸುಪ್ರಸಿದ್ಧ ನಟ. ಇತ್ತೀಚೆಗೆ ಅವರು ನಟಿಸಿದ ಮಾರ್ಕೋ ಚಿತ್ರವು ತುಂಬಾ ಚರ್ಚೆಗೆ ಗ್ರಾಸವಾಗಿದೆ. ಈ ಚಿತ್ರವನ್ನು ಭಾರತೀಯ ಸಿನಿಮಾದಲ್ಲಿಯೇ ಅತ್ಯಂತ ಹಿಂಸಾತ್ಮಕ ಚಿತ್ರ ಎಂದು ಕರೆಯಲಾಗುತ್ತಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ ʼಜೈಲರ್ʼ ಚಿತ್ರದಲ್ಲಿಯೂ ವಿನಾಯಗನ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು.
#Vinayakan 🥃🔞🙉
Actor or Drunker 😡
He should be banned from acting.— Tharani ᖇᵗк (@iam_Tharani) January 20, 2025
What Happened to actor #Vinayakan ? pic.twitter.com/nTD7oFVv8X
— HIPPO 😌 (@hippopotaamus) January 21, 2025
Why #Vinayakan is not arrested for that behaviour? Ippo oraalde dress ne pati paramarshichal vare arrest cheyyunille ithu aareyum bhaadikunnilla enn aano? Also he used curse words too…evident.
— Aneerav (@varmaa_n) January 21, 2025