alex Certify ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ, 10 ಸಾವಿರ ರೂ. ದಂಡ

ತುಮಕೂರು: ವಿದ್ಯಾರ್ಥಿನಿಗೆ ಹೊಡೆದ ಶಿಕ್ಷಕಿಗೆ ತುಮಕೂರು ನಗರದ ಮೂರನೇ ಅಪರ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಭಾರತಮಾತಾ ಶಾಲೆ ಶಿಕ್ಷಕಿ ಫರಹತ್ ಫಾತಿಮಾ ಶಿಕ್ಷೆಗೆ ಒಳಗಾದವರು. 2011 ರ ಫೆಬ್ರವರಿ 17 ರಂದು ಸರಿಯಾಗಿ ಓದಿಲ್ಲವೆಂದು 7 ವರ್ಷದ ಬಾಲಕಿಗೆ ಕೋಲಿನಿಂದ ಹೊಡೆದಿದ್ದು, ಇದರಿಂದಾಗಿ ಬಾಲಕಿ ಕಣ್ಣಿಗೆ ಹಾನಿಯಾಗಿತ್ತು.

ತುಮಕೂರಿನ ತಿಲಕ್ ಪಾರ್ಕ್ ಠಾಣೆ ಪೊಲೀಸರು ಆರೋಪಿತ ಶಿಕ್ಷಕಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಭಾರತೀಯ ದಂಡ ಸಂಹಿತೆ 325 ಅಡಿಯಲ್ಲಿ ಶಿಕ್ಷಕಿ ಅಪರಾಧ ಎಸಗಿರುವುದು ಸಾಬೀತಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶೆ ಶಾರದಾ ಕೊಪ್ಪದ ಅವರು ಶಿಕ್ಷಕಿಗೆ 3 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...