ವಾಷಿಂಗ್ಟನ್: ಕೌಟುಂಬಿಕ ದೌರ್ಜನ್ಯದ ಆರೋಪದಲ್ಲಿ ಜೈಲು ಶಿಕ್ಷೆ ಪ್ರಕಟಿಸಿದ ನ್ಯಾಯಾಧೀಶರ ಮೇಲೆಯೇ ಅಪರಾಧಿಯೊಬ್ಬ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.
ಅಮೆರಿಕದ ಲಾಸ್ ವೇಗಾಸ್ ನ ಕ್ಲಾರ್ಕ್ ಕೌಂಟಿ ನ್ಯಾಯಾಲಯದಲ್ಲಿ 30 ವರ್ಷದ ಡಿಯೋಬ್ರಾ ರೆಡ್ಡೆನ್ ನ್ಯಾಯಾಧೀಶ ಮೇರಿ ಕೇ ಹೋಲ್ಥಸ್ನ ಬೆಂಚ್ ಮೇಲೆ ಹಾರಿ ನ್ಯಾಯಾಧೀಶೆಯ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವಿಡಿಯೋದಲ್ಲಿ ಸೆರೆಯಾಗಿದೆ.
ನ್ಯಾಯಾಲಯದ ಸಿಬ್ಬಂದಿ ನ್ಯಾಯಾಧೀಶರ ರಕ್ಷಣೆಗೆ ಧಾವಿಸಿ, ಅಪರಾಧಿಯನ್ನು ನ್ಯಾಯಾಧೀಶರಿಂದ ಹೊರಗೆಳೆದು, ಅವನನ್ನು ದೂರವಿರಿಸಲು ಪ್ರಯತ್ನಿಸುತ್ತಿದ್ದಂತೆ ಪದೇ ಪದೇ ಹೊಡೆಯುತ್ತಿದ್ದರು.
ಜಗಳದಲ್ಲಿ ಕೋರ್ಟ್ ಮಾರ್ಷಲ್ ಗಾಯಗೊಂಡಿದ್ದು, ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ನ್ಯಾಯಾಲಯದ ವಕ್ತಾರರು ತಿಳಿಸಿದ್ದಾರೆ. ನ್ಯಾಯಾಧೀಶರಿಗೂ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ.