ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬ ಮೂವರಿಗೆ ಚಮಚದಿಂದ ಇರಿದು ಗಾಯಗೊಳಿಸಿದ್ದಾನೆ. ಉಡುಪಿ ಮೂಲದ 30 ವರ್ಷದ ಪ್ರಶಾಂತ್ ಇಂತಹ ಕೃತ್ಯವೆಸಗಿದವ ಎನ್ನಲಾಗಿದೆ.
ಈತ ಮೂವರು ಕೈದಿಗಳ ಮೇಲೆ ಸ್ಪೂನ್ ನಿಂದ ಚುಚ್ಚಿದ್ದು, ಮಲ್ಲೇಶಪ್ಪ, ದೇವೇಂದ್ರಪ್ಪ, ಬೆನಕ ಶೆಟ್ಟಿ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ಸಂಜೆ ಕೈದಿಗಳ ನಡುವೆ ನೀರಿನ ವಿಚಾರಕ್ಕೆ ಜಗಳವಾಗಿದ್ದು, ಜಗಳ ಬಿಡಿಸಲು ಹೋದ ಈ ಮೂವರ ಮೇಲೆ ಪ್ರಶಾಂತ್ ಹಲ್ಲೆ ಮಾಡಿದ್ದಾನೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಪ್ರಶಾಂತ್ ಇಂತಹ ಕೃತ್ಯವೆಸಗಿದ್ದಾನೆ ಎಂದು ಹೇಳಲಾಗಿದೆ.